DARK MODE 

ಶನಿವಾರ, ಏಪ್ರಿಲ್ 14, 2018

ವಿಷು ಹಬ್ಬ

              ವಿಷು ಕೇರಳ ಮತ್ತು ತುಳುನಾಡು ಪ್ರದೇಶದಲ್ಲಿ ಕೃಷಿ ಸಂಸ್ಕೃತಿಯ ಜನತೆಯಿಂದ ಮೇಷ ತಿಂಗಳ ೧ನೇ ದಿನಾಂಕದಂದು  ಹೊಸವರ್ಷವಾಗಿ ಆಚರಿಸಲ್ಪಡುತ್ತದೆ. ಇದು ಒಂದು ಕೃಷಿ ಹಿನ್ನೆಲೆ ಇರುವ ಹಿಂದೂ ಹಬ್ಬವಾಗಿದೆ. ವಿಷುವನ್ನು ವೈಭವ ಮತ್ತು ಉತ್ಸಾಹದಿಂದ ಕೇರಳದ ಎಲ್ಲ ಭಾಗಗಳಲ್ಲಿ ಆಚರಿಸಲಾಗುತ್ತದೆ. ಅದನ್ನು ಬೆಳಕಿನ ಮತ್ತು ಸುಡುಮದ್ದುಗಳ ಹಬ್ಬವೆಂದು ಪರಿಗಣಿಸಲಾಗುತ್ತದೆ ಮತ್ತು ದೀಪಗಳನ್ನು ಅಲಂಕರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದು ಆಚರಣೆಯ ಭಾಗವಾಗಿದೆ. ಈ ದಿನದ ಹಿಂದಿನ ದಿನ ಕೃಷಿಕರು ತಮ್ಮ ಕೃಷಿ ಫಲಗಳನ್ನು, ಅಷ್ಟಮಾಂಗಲ್ಯ, ಗ್ರಂಥ, ಶುಭದಾಯಕವಾದ ಇತರ ವಸ್ತುಗಳನ್ನು ದೇವರ ಕೊನೆಯಲ್ಲಿ ಇಟ್ಟು ವಿಷುವಿನ ದಿನ ಮುಂಜಾನೆ ಎದ್ದು ಕಣಿ ನೋಡಿ ಸಮೀಪದ ದೇವಾಲಯ, ನೆರೆಕರೆಯ ಮನೆಗಳಿಗೆ ಹೋಗಿ ಬರುವ ವಾಡಿಕೆ ಇದೆ. ಹಬ್ಬದ ದಿನ ಮಧ್ಯಾಹ್ನ ಮನೆಯವರೆಲ್ಲ ಸೇರಿ ಒಟ್ಟಿಗೆ ಕುಳಿತು ಮೃಷ್ಟಾನ್ನ ಭೋಜನ ಸೇವಿಸುತ್ತಾರೆ.

ಕಣಿಕೊನ್ನೆ ಹೂವು


"ಎಲ್ಲರಿಗೂ ವಿಷು ಹಬ್ಬದ ಶುಭಾಷಯಗಳು."

1 ಕಾಮೆಂಟ್‌:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು