DARK MODE 

ಸೋಮವಾರ, ಜೂನ್ 01, 2020

ಕೇರಳದ ಕನ್ನಡ ಮಕ್ಕಳಿಗಾಗಿ "ಅಪೂರ್ವಂ" ಆ್ಯಪ್

"ಆನ್‌ಲೈನ್ ಶಿಕ್ಷಣದ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಅಪೂರ್ವಂ ಆ್ಯಪ್ ಯೋಜನೆ ಇದೀಗ ಕೈಬಿಡಲಾಗಿದೆ."

ಕೋವಿಡ್-19 ರ ಹಿನ್ನೆಲೆಯಲ್ಲಿ ಕಾಸರಗೋಡಿನ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಸರಕಾರದ ಶಿಕ್ಷಣ ಕೊಂಡಿಗಳನ್ನು ಒಟ್ಟುಗೂಡಿಸಿ ಆನ್ಲೈನ್ ಶಿಕ್ಷಣದಲ್ಲಿ ಹೊಸ ಪ್ರಯತ್ನಕ್ಕಾಗಿ ನಮ್ಮ ಕನ್ನಡ ಕಾಸರಗೋಡು ತಂಡವು ನೂತನವಾದ  "ಅಪೂರ್ವಂ" ಎಂಬ ಆಂಡ್ರಾಯ್ಡ್ ಆ್ಯಪ್‌ನ್ನು ಸೃಷ್ಟಿಸಿದೆ. ಸದ್ಯಕ್ಕೆ 9 ಮತ್ತು 10 ನೇ ತರಗತಿಗಳ ಸಂಪನ್ಮೂಲ ಮಾತ್ರ ಲಭ್ಯ. ಇದರ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳೂ ಪಡೆಯುವಂತಾಗಲಿ ಎಂಬುದು ನಮ್ಮ ಬಯಕೆ. ಈ  ಆ್ಯಪ್‌ನ್ನು ಅಭಿವೃದ್ಧಿಗೊಳಿಸಲು ನಿಮ್ಮೆಲ್ಲರ ಸಲಹೆ, ಮಾರ್ಗದರ್ಶನ, ಸಹಾಯ ಅಗತ್ಯವಾಗಿದೆ. ಶಿಕ್ಷಣ ಸಂಬಂಧಿ ಸಂಪನ್ಮೂಲಗಳನ್ನು ನಮ್ಮ ಜೊತೆ ಹಂಚಿಕೊಂಡರೆ ತಂತ್ರಾಂಶಕ್ಕೆ ಸೇರಿಸಲಾಗುವುದು.

ಆ್ಯಪ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ
https://drive.google.com/file/d/14bjPDbreiODraSpLqYoT0oWAjm-xAe3F/view?usp=sharing
ಆ್ಯಪ್ ಡೌನ್‌ಲೋಡ್ ಮಾಡುವಾಗ ಅದರ filename "Apoorvam" ಆಗಿದೆಯೋ ಎಂಬುದು ಖಚಿತಪಡಿಸಿಕೊಳ್ಳಿರಿ. ಇತರ ಆ್ಯಪ್‌ಗಳ ಮೋಸಕ್ಕೆ ಬಲಿಯಾಗದಿರಿ.
Apoorvam.apk ಫೈಲ್ ಇನ್‌ಸ್ಟಾಲ್ ಮಾಡುವಾಗ ತೆರೆದು ಬರುವ ವಿಂಡೋದಲ್ಲಿ install anyway ಎಂಬ ಆಯ್ಕೆ ನೀಡಬೇಕು
ಸದ್ಯಕ್ಕೆ ಈ ಆ್ಯಪ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿಲ್ಲ.

ತತ್ಕಾಲ 9 ಮತ್ತು 10 ನೇ ತರಗತಿ ಸಂಪನ್ನೂಲ ಮಾತ್ರ ಲಭ್ಯ. ಸಹಕರಿಸಿ

ಏನಿದು ದೀಕ್ಷಾ..? ಇದು ಕಾಸರಗೋಡಿನ ಕನ್ನಡ ಮಕ್ಕಳಿಗೆ ಹೇಗೆ ಸಹಕಾರಿ..?
9 ಮತ್ತು 10ರ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರದ ದೀಕ್ಷಾ ಶಿಕ್ಷಣ ವೇದಿಕೆ
ಹೆಚ್ಚಿನ ಮಾಹಿತಿಗಾಗಿ.... https://kannadakasaragod.blogspot.com/2020/06/Diksha-web.html

ಹೆಚ್ಚಿನ ಮಾಹಿತಿಗಾಗಿ  kannadakasaragod@gmail.com
"ಆನ್‌ಲೈನ್ ಶಿಕ್ಷಣದ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಅಪೂರ್ವಂ ಆ್ಯಪ್ ಯೋಜನೆ ಇದೀಗ ಕೈಬಿಡಲಾಗಿದೆ."

3 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ಸದ್ಯಕ್ಕೆ ಅಪೂರ್ವಂ ಆ್ಯಪ್‌ನಲ್ಲಿ 9 ಮತ್ತು 10 ನೇ ತರಗತಿಯ ಸಂಪನ್ಮೂಲ ಮಾತ್ರ ಲಭ್ಯವಿದೆ. ಅವು ನಾವು ಸೃಷ್ಟಿಸಿದ ಸಂಪನ್ಮೂಲಗಳು ಅಲ್ಲ. ನಾವು ಅಂತರ್ಜಾಲದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾತ್ರ ಮಾಡಿದ್ದೇವೆ. ಹೆಚ್ಚಿನ ಮಾಹಿತಿಗಳು ಲಭ್ಯವಾದರೆ ಸೇರಿಸುತ್ತೇವೆ. ಸಹಕರಿಸಿ.
      9, 10 ತರಗತಿಗಳಿಗಾಗಿ "ದೀಕ್ಷಾ ಆನ್‌ಲೈನ್" https://kannadakasaragod.blogspot.com/2020/06/Diksha-web.html

      ಧನ್ಯವಾದ...
      ನಮ್ಮ ಮೈಲ್ ಐಡಿ : kannadaKasaragod@gmail.com

      ಅಳಿಸಿ
  2. ದೀಕ್ಷಾ ವೆಬ್ ಲಿಂಕ್‌ಗಾಗಿ ಮೇಲೆ ಕಾಣುವ "ಮುಖಪುಟ" ಲಿಂಕ್ ಸಂದರ್ಶಿಸಬಹುದು

    ಪ್ರತ್ಯುತ್ತರಅಳಿಸಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು