9 ಮತ್ತು10 ನೇ ತರಗತಿ ಮಕ್ಕಳ ಶಿಕ್ಷಣಕ್ಕೆ ಹೇಗೆ ಸಹಕಾರಿ....?
ದೀಕ್ಷಾ ಎಂಬುದು ಆಯಾ ರಾಜ್ಯದ ಶಿಕ್ಷಣ ಇಲಾಖೆಗಳೊಂದಿಗೆ ಕೈ ಜೋಡಿಸಿ ಭಾರತ ಸರಕಾರವು ಅಭಿವೃದ್ಧಿ ಪಡಿಸಿದ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದೆ. ಈ ವೇದಿಕೆಯ ಮೂಲಕ ಭಾರತದಾದ್ಯಂತ ಇರುವ ಎಲ್ಲಾ ರಾಜ್ಯಗಳ ಶಾಲಾ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳು ಮಾತೃಭಾಷೆಯಲ್ಲಿ ಲಭಿಸುತ್ತದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಉಚಿತವಾಗಿ ಪಡೆದುಕೊಳ್ಳಬಹುದು. ಆದರೆ ಇದು ಸಂಪೂರ್ಣವಲ್ಲ ಎಂಬುದು ಮರೆಯಬಾರದು.
ಕೇರಳ ಸರಕಾರ ಕೋವಿಡ್-19 ರ ಹಿನ್ನೆಲೆಯಲ್ಲಿ ಆನ್‌ಲೈನ್ ಪಾಠ ಆರಂಭಿಸಿದರೂ ಕಾಸರಗೋಡಿನ ಕನ್ನಡ ಮಕ್ಕಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಸದ್ಯಕ್ಕೆ ಆಗಿಲ್ಲ. ಇದನ್ನು ಪರಿಹರಿಸಲು ನಾವು ಕನ್ನಡಿಗರೇ ಪರ್ಯಾಯ ವ್ಯವಸ್ಥೆ ಹುಡುಕಬೇಕಾಗಿದೆ.
ಸದ್ಯದ ಸ್ಥಿತಿಯಲ್ಲಿ ಕೇರಳದ ಕನ್ನಡ ಮಾಧ್ಯಮದ 9 ಮತ್ತು 10 ನೇ ತರಗತಿಗಳ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಮಾಜ ವಿಜ್ಞಾನ-|, ಸಮಾಜ ವಿಜ್ಞಾನ-|| ಪಾಠಭಾಗಗಳ ವಿಡಿಯೋ ಮಾತ್ರ ಲಭ್ಯ.
ದೀಕ್ಷಾ ತಂತ್ರಾಂಶವನ್ನು ಬಳಸುವುದು ಹೇಗೆ...?
ಮೊಬೈಲ್ ಮೂಲಕ ಸರಳವಾಗಿ ಗೂಗಲ್ ಕ್ರೋಂ ಮೊದಲಾದ ಬ್ರೌಸರ್ ಮೂಲಕ ಬಳಸಬಹುದು. ಅದರ ಕೊಂಡಿಗಳು ಈ ರೀತಿ ಇದೆ.
ಕೇರಳ ರಾಜ್ಯ ಕನ್ನಡ ಮಾಧ್ಯಮ - 10 ನೇ ತರಗತಿ: https://diksha.gov.in/explore?board=State%20(Kerala)&medium=Kannada&gradeLevel=Class%2010
ಕೇರಳ ರಾಜ್ಯ ಕನ್ನಡ ಮಾಧ್ಯಮ - 9 ನೇ ತರಗತಿ: https://diksha.gov.in/explore?board=State%20(Kerala)&medium=Kannada&gradeLevel=Class%209
ಅಥವಾ ದೀಕ್ಷಾ ಆ್ಯಪನ್ನು ಕೂಡ ಬಳಸಬಹುದು.
ಆ್ಯಪ್ ಡೌನ್‌ಲೋಡ್ ಮಾಡಬೇಕಾದ ಕೊಂಡಿ : https://play.google.com/store/apps/details?id=in.gov.diksha.app
ಆ್ಯಪ್ ಇನ್‌ಸ್ಟಾಲ್ ಮಾಡಿದ ನಂತರದ ಹಂತಗಳು:
೧. ಆ್ಯಪನ್ನು ತೆರೆದು ಭಾಷೆಯನ್ನು ಕನ್ನಡ ಆಯ್ಕೆ ಮಾಡಬೇಕು.
೨. ನಂತರ "ವಿಧ್ಯಾರ್ಥಿ" ಎಂದು ಆಯ್ಕೆ ಮಾಡಬೇಕು.
೩. ನಂತರ ಮಂಡಳಿ ಎಂಬಲ್ಲಿ "Kerala (state) ಎಂದು ಆಯ್ಕೆಮಾಡಬೇಕು.
೪. ನಂತರ ಮಾಧ್ಯಮ ಎಂಬಲ್ಲಿ " ಕನ್ನಡ" ಆಯ್ಕೆ ಮಾಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ