ಗಡಿನಾಡು ಕನ್ನಡಿಗ ಪ್ರಮಾಣ ಪತ್ರ ಪಡೆಯಲು ಗಡಿನಾಡು ಕನ್ನಡಿಗರು ಅನುಸರಿಸಬೇಕಾದ ಕ್ರಮಗಳು:
- ನೀವು ವಾಸವಾಗಿರುವ ಪ್ರದೇಶದ ವ್ಯಾಪ್ತಿಯ ಗ್ರಾಮ ಕಛೇರಿಗೆ ಭೇಟಿ ನೀಡಿ ಕನ್ನಡ ಭಾಷಾ ಅಲ್ಪಸಂಖ್ಯಾತ ಪ್ರಮಾಣ ಪತ್ರ (Kannada Linguistic Minority Certificate) ನೀಡುವಂತೆ 5 ರೂಪಾಯಿ ಮೌಲ್ಯದ ಕೋರ್ಟ್ ಫೀ ಸ್ಟ್ಯಾಂಪ್ ಅಂಟಿಸಿದ ಸಾಮಾನ್ಯ ಅರ್ಜಿಯೊಂದನ್ನು ಪ್ರಮಾಣ ಪತ್ರದ ಅಗತ್ಯತೆಯ ಸಮೇತ ಸ್ವತಃ ಬರೆದು ಗ್ರಾಮಾಧಿಕಾರಿಗೆ ನೀಡಬೇಕು. ಧೃಡೀಕರಣಕ್ಕಾಗಿ ನಿಮ್ಮ ಎಸ್ಸೆಸೆಲ್ಸಿ ಪ್ರಮಾಣ ಪತ್ರದ ನಕಲು ಪ್ರತಿಯೊಂದನ್ನು ನೀಡಿರಿ.
- ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಗ್ರಾಮಾಧಿಕಾರಿಯು ತಹಸಿಲ್ಧಾರರಿಗೆ ವರದಿಯೊಂದನ್ನು ಬರೆದು, ನಿಮ್ಮ ಅರ್ಜಿ ಮತ್ತು ಎಸ್ಸೆಸೆಲ್ಸಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ವರದಿಯೊಂದಿಗೆ ಹಿಂತಿರುಗಿಸುತ್ತಾರೆ.
- ಮುಂದಿನ ಹಂತವಾಗಿ ನೀವು, ಗ್ರಾಮಾಧಿಕಾರಿ ನೀಡಿದ ಮೇಲಿನ ಮೂರು ದಾಖಲೆಗಳನ್ನು ತಾಲೂಕು ಕಛೇರಿಯ ಪ್ರಮಾಣ ಪತ್ರ ವಿಭಾಗದಲ್ಲಿ ಸಮರ್ಪಿಸಬೇಕು.
- ಇತರೆ ಯಾವುದೇ ಆಡಳಿತಾತ್ಮಕ, ಕಾನೂನಿನ ಸಮಸ್ಯೆಗಳಿಲ್ಲದಿದ್ದರೆ ಮೂರು ದಿನದ ಒಳಗಾಗಿ ಗಡಿನಾಡು ಕನ್ನಡಿಗ ಪ್ರಮಾಣ ಪತ್ರವು ಲಭಿಸುತ್ತದೆ.
ವಿ.ಸೂ :
- ಅರ್ಜಿಯನ್ನು ಬರೆಯುವಾಗ ನಿಮ್ಮ ಮೊಬೈಲ್ ಸಂಖ್ಯೆ ದಾಖಲು ಮಾಡಿರಿ.
- ಈ ಮೇಲಿನ ಯಾವುದೇ ಹಂತದಲ್ಲೂ ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡಬೇಡಿರಿ.
- ನೀವು ಕನ್ನಡ ಬಲ್ಲವರು ಎಂದು ಧೃಡೀಕರಿಸಲು ಮತ್ತು ನಿಮ್ಮನ್ನು ಗುರುತಿಸಲು ಎಸ್ಸೆಸೆಲ್ಸಿ ಪ್ರಮಾಣ ಪತ್ರ ನೆರವಾಗುತ್ತದೆ.
- ಗಡಿನಾಡು ಕನ್ನಡಿಗ ಪ್ರಮಾಣ ಪತ್ರ ಪಡೆಯಲು ನೀವು ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಗಡಿನಾಡು ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯಬೇಕಾಗುತ್ತದೆ.
- ಪೂರಕ ದಾಖಲೆಗಳು : ಆಧಾರ್ ಚೀಟಿಯ ನಕಲು, ಪಡಿತರ ಚೀಟಿಯ ನಕಲು ಪ್ರತಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ