DARK MODE 

ಸೋಮವಾರ, ನವೆಂಬರ್ 05, 2018

ಮಹಾಜನ ವರದಿ - ಕಾಸರಗೋಡಿನ ಕಣ್ಣೀರಿಗಿರುವ ಏಕೈಕ ಪರಿಹಾರ

ಮಹಾಜನ್ ಆಯೋಗ

      ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು. ಮೂಲತಃ ಪಂಜಾಬಿನವರು. ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿವಾದ ಬಗೆಹರಿಸಲು ಅಕ್ಟೋಬರ್ ೨೫, ೧೯೬೬ ರಂದು ರಚಿಸಿದ ಏಕ ಸದಸ್ಯ ಆಯೋಗಕ್ಕೆ ನೇತೃತ್ವ ವಹಿಸಿದವರು ಮಹಾಜನ್. ನವೆಂಬರ್ ೧೫, ೧೯೬೬ರಿಂದ ಮಹಾಜನ್ ಕಾರ್ಯ ಆರಂಭಿಸಿದರು. ಕರ್ನಾಟಕ - ಮಹಾರಾಷ್ಟ್ರ - ಕೇರಳ ನಡುವಿನ ಗಡಿ ವಿವಾದ ಈ ಆಯೋಗ ಆಗಸ್ಟ್ ೨೫, ೧೯೬೭ರಂದು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿತು. ಮಹಾರಾಷ್ಟ್ರದ ಒತ್ತಾಸೆಯಿಂದಲೇ ಮಹಾಜನ ಆಯೋಗ ರಚನೆ ಆಯಿತು. ಆದರೂ ಆಯೋಗದ ಶಿಫಾರಸ್ಸಿನಂತೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಾರಾಷ್ಟ್ರ ಮಹಾಜನ ಆಯೋಗದ ವರದಿಯನ್ನು ತಿರಸ್ಕರಿಸಿತು. ಗಡಿ ವಿವಾದವನ್ನು ಆರಂಭಿಸಿತು.

ಮಹಾಜನ ವರದಿ ಜಾರಿಗೆ ಬಂದರೆ ಕರ್ನಾಟಕಕ್ಕೆ ಆಗುವ ಲಾಭ

೧. ದಕ್ಷಿಣ ಸೊಲ್ಲಾಪುರದ ೬೫ ಹಳ್ಳಿ 

೨. ಇಡೀ ಅಕ್ಕಲಕೋಟೆ ತಾಲೂಕು 

೩. ಜತ್ತ ತಾಲೂಕಿನ ೪೪ ಹಳ್ಳಿ 

೪. ಗಡಹಿಂಗ್ಲಜ ತಾಲೂಕಿನ ೧೫ ಹಳ್ಳಿ 

೫. ಕೇರಳದ ಚಂದ್ರಗಿರಿ ನದಿಯ ಉತ್ತರಭಾಗ (ಕಾಸರಗೋಡು ಸೇರಿದಂತೆ)


ಕೃಪೆ : ಕನ್ನಡ ವಿಕಿಪೀಡಿಯ

2 ಕಾಮೆಂಟ್‌ಗಳು:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು