ಸಿರಿಗನ್ನಡವು ನಾಶದ ಅಂಚಿನಲ್ಲಿದಯೇ? ಖಂಡಿತವಾಗಿಯೂ...
ಕರುನಾಡಿನಲ್ಲಿ ಕನ್ನಡದ ರಕ್ಷಣೆಗೆ ಕೋಟಿಗಟ್ಟಲೆ ಜನರೆಡೆಯಲ್ಲಿ ಲಕ್ಷಗಟ್ಟಲೆ ಮಂದಿ ಕನ್ನಡಾಂಬೆಯ ಸೇವಕರಿದ್ದಾರೆ. ಆದರೆ ಗಡಿನಾಡಿನ ಸ್ಥಿತಿಯು ತೀರಾ ಭಿನ್ನವಾಗಿದೆ. ಗಡಿನಾಡಿನಲ್ಲಿರುವ ಕೆಲವೇ ಲಕ್ಷಮಂದಿಯಲ್ಲಿ ಕನ್ನಡಕ್ಕಾಗಿ ಕೈ ಎತ್ತಲು ಸಾಧ್ಯವಿರುವವರ ಸಂಖ್ಯೆ ತೀರಾ ಕಡಿಮೆ. ಆದುದ್ದರಿಂದ ನಮ್ಮ ಧ್ಯೇಯ "ಸಿರಿಗನ್ನಡಂ ಗೆಲ್ಗೆ...ಗಡಿನಾಡು ಬಾಳ್ಗೆ..." ಎಂದಾಗಬೇಕು. ಗಡಿನಾಡಿನ ಕನ್ನಡತನವನ್ನು ಉಳಿಸೋಣ ಹಾಗೂ ಬೆಳೆಸೋಣ. ಕನ್ನಡಕ್ಕಾಗಿ ನಮ್ಮ ಕೈಯನ್ನು ಮೇಲೆತ್ತೋಣ. ಗಡಿನಾಡೇ ನಮ್ಮ ಪಾಲಿಗೆ ಪುಣ್ಯಭೂಮಿ ಎಂಬ ಕಲ್ಪನೆ ನನಸಾಗಿಸೋಣ. ಶಾಂತಿ, ಸಹೋದರತೆಯ ಬದುಕನ್ನು ಕಟ್ಟೋಣ. ಕನ್ನಡ ಪ್ರೇಮವನ್ನು ಮೆರೆಯೋಣ.
ಸಿರಿಗನ್ನಡಂ ಗೆಲ್ಗೆ...ಗಡಿನಾಡು ಬಾಳ್ಗೆ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ