ಗಡಿನಾಡು ಕಾಸರಗೋಡಿನ ಬಡಗಣ ಪ್ರದೇಶಗಳಲ್ಲಿ ಇಂದಿಗೂ ಮಲೆಯಾಳ ಭಾಷೆಯ ಪ್ರಭಾವಕ್ಕೆ ಸಿಲುಕದೆ, ಪರಿಶುದ್ಧವಾದ ಹಚ್ಚ ಕನ್ನಡವನ್ನು ಪಸರಿಸುತ್ತಿರುವ ಅದೆಷ್ಟೋ ಗ್ರಾಮಗಳವೆ. ಆ ಕರುನಾಡಿನ ಚಿಲುಮೆಗಳನ್ನು ತೆಂಕಣದ ಬಾಹ್ಯ ಜಲಪ್ರವಾಹಗಳಿಂದ ಮಲಿನಗೊಳಿಸಲು ಸಹಕರಿಸಬೇಡಿರಿ.
ನಮ್ಮ ತಾಳ್ಮೆಯ ಮಿತಿ ಇದೀಗಲೇ ಮೀರಿ ಹೋಗಲಿದೆ. ನಮ್ಮ ಸಂಖ್ಯೆ ನಿಮಗೆ ಗೌಣವಾಗಿರಬಹುದು. ಆದರೆ ನಮ್ಮ ಪ್ರತಿಕ್ರಿಯೆ ನೀವು ಊಹಿಸಲಾರಿರಿ. ನಮ್ಮ ಸಂಸ್ಕೃತಿಯನ್ನು ನೀವು ನಿಂದಿಸಿದ್ದೀರಿ. ನಮ್ಮ ಹಕ್ಕುಗಳನ್ನು ನೀವು ಕಸಿದುಕೊಂಡಿದ್ದೀರಿ. ನಾವು ಮೌನ ಪಾಲಿಸಿದೆವು. ಆದರೆ ಇದೀಗ ನಿಮ್ಮ ಮಲೆಯಾಳೀಕರಣದ ಆಶಯ ಹೊತ್ತ ಕಣ್ಣುಗಳು ನಮ್ಮ ಗಡಿನಾಡಿನ ಸಂಪತ್ಭರಿತವಾದ ಕನ್ನಡ ಭಾಷೆಯ ಅಸ್ತಿತ್ವವನ್ನು ಶ್ರೇಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆಯ ಮರೆಯಲ್ಲಿ ಕರಾಳವಾದ ನಿಮ್ಮ ಸ್ವಾರ್ಥ ಕಾನೂನು ರಚನೆಯ ಮೂಲಕ ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿವೆ.
ಈ ಉಳಿವಿನ ಸಮಸ್ಯೆಯಿಂದ ನಮ್ಮನ್ನು ಪಾರುಮಾಡಲು ಮಾನ್ಯ ರಾಷ್ಟ್ರಪತಿಗಳು, ಮಾನ್ಯ ಪ್ರಧಾನ ಮಂತ್ರಿಗಳು, ಭಾಷಾ ಅಲ್ಪಸಂಖ್ಯಾತರ ವಿಶೇಷಾಧಿಕಾರಿಗಳು ಹಾಗೂ ಕೇರಳ ಮತ್ತು ಕರ್ನಾಟಕ ಪ್ರಾಂತ್ಯಗಳ ಆಡಳಿತ ವರ್ಗ ಶೀಘ್ರವಾಗಿ ಸ್ಪಂದಿಸಬೇಕಾಗಿ ಬೇಡಿಕೊಳ್ಳುತ್ತೇನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ