DARK MODE 

ಭಾನುವಾರ, ಜೂನ್ 23, 2019

ಕನ್ನಡಮಯವಾಗಲಿ ಎನ್ನ ದೇಹ...

ಸಿರಿಗನ್ನಡಂ ಗೆಲ್ಗೆ... ಗಡಿನಾಡು ಬಾಳ್ಗೆ... ಎಂಬ ಘೋಷವು ನಮ್ಮ ಧ್ಯೇಯವಾಗಬೇಕಿದೆ. ಕನ್ನಡ ನಮ್ಮದು ಎಂಬ ಭಾವ ನಮ್ಮಲ್ಲಿ ಅನುರಣಿಸುತ್ತಾ ಇರಬೇಕು‌.‌ ಕನ್ನಡಕ್ಕೆ ನಾವೇ ಆದ್ಯತೆ ನೀಡಬೇಕು. ಅಂದರೆ ನಾವೇನು ಕನ್ನಡ ಬಳಸುವುದಿಲ್ಲವೇ..., ನಮ್ಮಲ್ಲಿ ಕನ್ನಡ ಪ್ರೇಮ ಇಲ್ಲವೆ...? ಎಂಬ ಪ್ರಶ್ನೆ ಏಳುತ್ತದೆ. ಖಂಡಿತ ಅಲ್ಲ... ಪ್ರತಿ ಕನ್ನಡಿಗನಲ್ಲೂ ಕನ್ನಡದ ಕಾಳಜಿ ಇದೆ. ಆದರೆ ಬಹುಶಃ ಅದು ಹೆಚ್ಚಿನವರಲ್ಲಿ ಸುಪ್ತವಾಗಿಯೇ ಇರುತ್ತದೆ.

ಒಬ್ಬರು ಉಪನ್ಯಾಸಕರು ಒಂದು ತರಗತಿಯಲ್ಲಿ ವಿದ್ಯಾರ್ಥಿಗಳಲ್ಲಿ ನೀವು ಯಾರನ್ನು ಅತ್ಯಂತ ಪ್ರೀತಿಸುತ್ತೀರಿ ಎಂದು ಕೇಳಿದಾಗ ವಿದ್ಯಾರ್ಥಿಗಳು ಅಪ್ಪ, ಅಮ್ಮ, ತಮ್ಮ, ತಂಗಿ, ಅಣ್ಣ, ಅಕ್ಕ, ಗುರು ಹೀಗೆ ತಮ್ಮ ಆಪ್ತರನ್ನು ಹೇಳಿದರು. ಆಗ ಆ ಉಪನ್ಯಾಸಕರು ಎಲ್ಲರೂ ತಪ್ಪನ್ನೇ ಹೇಳಿದ್ದಾರೆ ಎಂದರು. ಆಗ ಒಬ್ಬ ವಿದ್ಯಾರ್ಥಿ ಪ್ರಶ್ನಿಸಿದ ನಾವು ಯಾರನ್ನು ಅತ್ಯಂತ ಪ್ರೀತಿಸುತ್ತೇವೆ ಎಂಬುದನ್ನು ನಮಗೆ ಮಾತ್ರ ಗೊತ್ತು, ನೀವು ಹೇಗೆ ನಮ್ನ ಪ್ರೀತಿ ಸುಳ್ಳು ಎಂದು ಹೇಳಲು ಸಾಧ್ಯ ಎಂದನು. ಆಗ ನಮ್ನ ಉಪನ್ಯಾಸಕರು ಪ್ರತಿಯೊಬ್ಬರು ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಸುವುದು ಸ್ವತಃ ನಮ್ಮನ್ನೆ. ಕಟು ಸತ್ಯವೇ ಸರಿ. ಏಕೆಂದರೆ ನಮ್ಮನ್ನು ಮಾತ್ರ ನಮಗೆ ಸಂಪೂರ್ಣವಾಗಿ ವಿಶ್ವಾಸ ಇರುತ್ತದೆ.

ಅಂದರೆ ಒಬ್ಬ ತಾನು ಜೀವನದಲ್ಲಿ ಕನ್ನಡವನ್ನೇ ಅತ್ಯಂತ ಪ್ರೀತಿಸುತ್ತೇನೆ ಎಂದು ಹೇಳಬಲ್ಲ. ಆದರೆ ಅದು ಒಂದು ಹಂತದವರೆಗೆ ಮಾತ್ರ ಅದು ಮೀರಿದರೆ ಆತನಿಗೆ ಆತನೇ ಸರ್ವಸ್ವ. ಯಾವಾಗ ಒಬ್ಬ ವ್ಯಕ್ತಿ ತನಗಿಂತ ತಾನು ಕನ್ನಡವನ್ನೇ ಪ್ರೀತಿಸುತ್ತೇನೆ ಎಂದು ಧೈರ್ಯವಾಗಿ ಹೇಳಬಲ್ಲನೋ,ಹೇಳಿದಂತೆ ನಡೆಯಬಲ್ಲನೋ, ಮತ್ತು ಆತನ ಮುಂದಿನ ತಲೆಮಾರುಗಳ ಜನರು ಅದೇ ನಿರ್ಣಯವನ್ನು ಸ್ವೀಕರಿಸುವರೋ ಆದಿನ ಕನ್ನಡದ ಸರ್ವ ಸಮಸ್ಯೆಗಳು ಮಾಯವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಪೊಟ್ಟಿ ಶ್ರೀರಾಮುಲು ಅವರ ಸಮರ್ಪಣಾ ಭಾವ ಮತ್ತು ಉಪವಾಸ ಮಾಡುವ ಶಕ್ತಿಯನ್ನು ಮನಗಂಡ ಮಹಾತ್ಮ ಗಾಂಧಿಯವರು "ಶ್ರೀರಾಮುಲು ಅವರ ಹಾಗೆ ಕೇವಲ ೧೧ ಜನ ಹೆಚ್ಚು ಅನುಯಾಯಿಗಳಿದ್ದಿದ್ದರೆ, ಒಂದೇ ವರ್ಷದಲ್ಲಿ ಬ್ರಿಟೀಷರಿಂದ ಸ್ವಾತಂತ್ರ್ಯ ಗಳಿಸುತ್ತೇನೆ" ಎಂದು ನುಡಿದ್ದಿದ್ದರು. ಅವರ ಇಚ್ಛಾಶಕ್ತಿ ಎಷ್ಟಿತ್ತೆಂದರೆ ಮದ್ರಾಸ್ ಪ್ರಾಂತ್ಯದಿಂದ ತೆಲುಗು ಭಾಷಾವಾರು ಪ್ರಾಂತ್ಯ ಆಂಧ್ರಪ್ರದೇಶ ರಚನೆಯಾಗಲು ನಿರಂತರ ೫೮ ದಿನ ಉಪವಾಸ ಸತ್ಯಾಗ್ರಹವನ್ನು ಮಾಡಿ ತಾಯ್ನುಡಿಗಾಗಿ ಪ್ರಾಣತ್ಯಾಗ ಮಾಡಿದರು. ನಮ್ಮೂರ ಭಾಷಾ ಸಮಸ್ಯೆಗಳು ಸ್ವಾತಂತ್ರ್ಯ ಪೂರ್ವದ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಇದ್ದಷ್ಟು ಜಟಿಲವಾಗಿಲ್ಲ. ಆದರೆ ಇಚ್ಛಾಶಕ್ತಿ ಇಲ್ಲದೆ ಯಾವುದೂ ಸಾಧ್ಯವಿಲ್ಲ. 

ಕನಿಷ್ಠ ಇದನ್ನಾದರೂ ಮರೆಯದಿರಿ...
ಸಿರಿಗನ್ನಡಂ ಗೆಲ್ಗೆ... ಗಡಿನಾಡು ಬಾಳ್ಗೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು