DARK MODE 

ಮಂಗಳವಾರ, ಅಕ್ಟೋಬರ್ 20, 2020

ಭಾರತದ ರಾಷ್ಟ್ರೀಯ ಸಂಕೇತಗಳು - 01

ಭಾರತದ ರಾಷ್ಟ್ರೀಯ ಸಂಕೇತಗಳು
❖ ಮಾಹಿತಿ ಮೂಲ : ವಿಕಿಪೀಡಿಯ ತಾಣ (ಕನ್ನಡ, ಮಲೆಯಾಳಂ, ಇಂಗ್ಲೀಷ್) ಮತ್ತು ಇತರೆ
❖ ಮಾಹಿತಿ ಸಂಗ್ರಹ : kn-PSC ಬ್ಲಾಗ್
❖ ಪ್ರಕಟಿಸಿದ ದಿನಾಂಕ : 20-10-2020
❖ ನವೀಕರಿಸಿದ ದಿನಾಂಕ : 20-10-2020
ರಾಷ್ಟ್ರ ಧ್ವಜ - ತ್ರಿವರ್ಣ ಧ್ವಜ
ಸಮನಾಂತರ ಆಯತಾಕಾರದಲ್ಲಿರುವ ತ್ರಿವರ್ಣ ಧ್ವಜವು ಮೇಲ್ಭಾಗದಲ್ಲಿ ಕೇಸರಿ, ಮಧ್ಯದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣವನ್ನು ಹೊಂದಿದೆ ಹಾಗು ಮಧ್ಯಭಾಗದಲ್ಲಿ 24 ಗೆರೆಗಳುಳ್ಳ ಅಶೋಕನ ಚಕ್ರವಿದೆ ಈ ಧ್ವಜವನ್ನು ಪಿಂಗಳಿ ವೆಂಕಯ್ಯನವರು ರಚಿಸಿದರು.
ರಾಷ್ಟ್ರೀಯ ಚಿಹ್ನೆ - ಅಶೋಕನ ನಾಲ್ಕು ಸಿಂಹಗಳ ಲಾಂಛನ
ಭಾರತ ಗಣರಾಜ್ಯವಾದ ದಿನವಾದ ಜನವರಿ 24, 1950 ರಂದು (ಮೌರ್ಯ ವಂಶದ ಚಕ್ರವರ್ತಿ ಸಾಮ್ರಾಟ ಅಶೋಕನು ವಾರಣಾಸಿಯ ಬಳಿಯ ಸಾರಾನಾಥದಲ್ಲಿ ಸ್ಥಾಪಿಸಿದ ಕಂಬದ ತುದಿಯಲ್ಲಿನ) ಚತುರ್ಮುಖದ ಸಿಂಹದ ಲಾಂಛನವನ್ನು ಭಾರತದ ರಾಷ್ಟ್ರೀಯ ಲಾಂಛನವಾಗಿ ಸ್ವೀಕರಿಸಲಾಯಿತು ಮತ್ತು ಲಾಂಛನದ ಕೆಳಗೆ "ಸತ್ಯಮೇವ ಜಯತೆ" ಎಂಬ ಧ್ಯೇಯವಾಕ್ಯವನ್ನು ಬರೆಯಲಾಗಿದೆ. ಇದನ್ನು ಪವಿತ್ರ ಹಿಂದೂ ವೇದಗಳ ಮುಕ್ತಾಯದ ಭಾಗವಾದ ಮುಂಡಕ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ. ಸ್ವತಂತ್ರ ಭಾರತದ ಮೊದಲ ಅಂಚೆಚೀಟಿಯು ತ್ರಿವರ್ಣ ಧ್ವಜವನ್ನು ಹೊತ್ತು 1947ರ ನವಂಬರ 21ರಂದು ಬಿಡುಗಡೆಯಾಯಿತು. ಅದಾಗಿ 24 ದಿನಗಳ ಬಳಿಕ ಡಿಸೆಂಬರ 15ರಂದು ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಮೇಲಿರುವ ಚತುರ್ಮುಖ ಸಿಂಹಗಳ ಚಿತ್ರವನ್ನು ಹೊತ್ತು ಎರಡನೆಯ ಅಂಚೆಚೀಟಿ ಹೊರಬಂದಿತು. 
ರಾಷ್ಟ್ರೀಯ ಪಂಚಾಂಗ - ಶಕ ಪಂಚಾಂಗ
ಶಕ ಪಂಚಾಂಗವನ್ನು ಕ್ಯಾಲೆಂಡರ್ ಸಮಿತಿಯು 1957 ರಲ್ಲಿ ಪರಿಚಯಿಸಿತು. ಇದು ಅಧಿಕೃತವಾಗಿ 1879 
ಚೈತ್ರ ಮಾಸದ ಒಂದನೆಯ ತಾರೀಕು, ಅಂದರೆ ಗ್ರಿಗೋರಿಯನ್‌ ಪಂಚಾಂಗದ ಪ್ರಕಾರ 22 ಮಾರ್ಚ್ 1957 ರಲ್ಲಿ ಅಂಗೀಕರಿಸಲಾಯಿತು. ಇದನ್ನು ಕ್ರಿ.ಶ 78 ರಲ್ಲಿ ಕನಿಷ್ಕ ದೊರೆಯು ಆರಂಭಿಸಿದನು.
ರಾಷ್ಟ್ರ ಗೀತೆ - ಜನ ಗಣ ಮನ
ರವೀಂದ್ರನಾಥ ಠಾಗೋರ್ ಅವರು ರಚಿಸಿದ ಜನ ಗಣ ಮನವನ್ನು 24 ಜನವರಿ 1950 ರಂದು ಭಾರತದ ರಾಷ್ಟ್ರಗೀತೆಯಾಗಿ ಸಂವಿಧಾನ ಸಭೆಯು ಅಧಿಕೃತವಾಗಿ ಅಂಗೀಕರಿಸಿತು. ಈ ಗೀತೆಯನ್ನು 52 ಸೆಕೆಂಡ್‌ ಸಮಯದೊಳಗೆ ಹಾಡಬೇಕೆಂದು ನಿಯಮವಿದೆ. 
ರಾಷ್ಟ್ರೀಯ ಹಾಡು - ವಂದೇ ಮಾತರಂ
ಪ್ರಸಿದ್ಧ ಬಂಗಾಳಿ ಕವಿ ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ "ಆನಂದ ಮಠ" ಕಾದಂಬರಿಯಿಂದ ಆಯ್ದ ವಂದೇ ಮಾತರಂ ಗೀತೆಯ ಮೊದಲ ಎರಡು ಪದ್ಯಗಳನ್ನು(ಪ್ಯಾರಗಳನ್ನು) 1950 ರಲ್ಲಿ ಭಾರತದ ರಾಷ್ಟ್ರೀಯ ಗೀತೆಯಾಗಿ ಸ್ವೀಕರಿಸಲಾಯಿತು. 1896 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು "ವಂದೇ ಮಾತರಂ"‌ ಮೊದಲ ಬಾರಿಗೆ ಹಾಡಿದರು. 
ನಿಷ್ಠೆಯ ಪ್ರಮಾಣ - ರಾಷ್ಟ್ರೀಯ ಪ್ರತಿಜ್ಞೆ
ಇದನ್ನು ತೆಲುಗಿನಲ್ಲಿ "ಪಿಡಿಮರಿ ವೆಂಕಟ ಸುಬ್ಬ ರಾವ್" ಅವರು 1962 ರಲ್ಲಿ ಬರೆದಿದ್ದಾರೆ. 

ಭಾಗ-2 ರಲ್ಲಿ ಮುಂದುವರಿಯುವುದು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು