DARK MODE 

ಭಾನುವಾರ, ನವೆಂಬರ್ 01, 2020

ವರ್ಷಗಳ ನಂತರ...

ಮತ್ತೊಂದು ಕರಾಳ ದಿನ...

ಎಷ್ಟು ವರ್ಷ ಆಯಿತೋ...

ಲೆಕ್ಕ ಮಾಡಲು ಆಸಕ್ತಯಿಲ್ಲ...

ಗಡಿನಾಡ ಕನ್ನಡಿಗರ ಕಣ್ಣೀರು ಬತ್ತಿಹೋಗಿದೆ. ಇಂದು ಗಡಿನಾಡ ಜನರು ಗತಕಾಲವನ್ನು ಮರೆತಿದ್ದಾರೆ. ವಿಶಾಲ ಸಂಸ್ಕೃತಿಯ ಸಾಗರದಲ್ಲಿ ಬೆರೆತಿದ್ದಾರೆ. ಗಡಿನಾಡ ಅಚ್ಚಗನ್ನಡವು ಕಲಬೆರಕೆಗೊಳ್ಳುತ್ತಿದೆ. ಕನ್ನಡವು ಶಾಲೆಯ ತರಗತಿಯ ನಾಲ್ಕು ಗೋಡೆಯೊಳಗೆ ಮತ್ತು ಮನೆಯ ನಾಲ್ಕು ಗೋಡೆಗೆ ಸೀಮಿತವಾಗಿದೆ. ಸಾರ್ವಜನಿಕವಾಗಿ ಕನ್ನಡ ಮಾತನಾಡುವ ಅವಕಾಶ ಕಳೆದುಕೊಳ್ಳುತ್ತಿದ್ದೇವೆ, ಹಲವು ಸಂದರ್ಭಗಳಲ್ಲಿ ಅವಕಾಶವೇ ಇಲ್ಲ. ಕನ್ನಡ ಬಾರದವರು ಕನ್ನಡದಲ್ಲಿ ಕಲಿಸಲು ನೇಮಕಗೊಂಡಿದ್ದಾರೆ; ಮುಂದಿನ ದಿನಗಳಲ್ಲಿ ಕನ್ನಡ ಕಲಿಸಲು ಕನ್ನಡ ಬಾರದವರು ನೇಮಕಗೊಂಡರೆ ಆಶ್ಚರ್ಯವಿಲ್ಲ. 

ಕನ್ನಡಿಗರು ರಾಜಕೀಯವಾಗಿ, ವಿವಿಧ ಭಾಷಾ ಪಂಗಡಗಳ ಹೆಸರಲ್ಲಿ ನೂರೆಂಟು ಪಾಲಾಗಿದ್ದಾರೆ... ಗಡಿನಾಡ ವೈಶಿಷ್ಟ್ಯವೆಂದರೆ ಸಾಮಾನ್ಯವಾಗಿ ಇಲ್ಲಿನ ಕನ್ನಡಿಗರಿಗೆ ಎರಡು ಭಾಷೆ ಬಳಸುತ್ತಾರೆ. ವ್ಯಾವಹಾರಿಕವಾಗಿ ಕನ್ನಡವಾದರೂ ಮನೆಭಾಷೆ ಅಥವಾ ಸಮೂಹದಲ್ಲಿ ತುಳು, ಮರಾಠಿ, ಕೊಂಕಣಿ, ಹವ್ಯಕ, ಅರೆಭಾಷೆ ಮೊದಲಾದ ಕನ್ನಡಮ್ಮನ ಉಪಭಾಷೆಗಳು ಅಥವಾ ಸಮೂಹದ ಭಾಷೆಗಳನ್ನು ಬಳಸುತ್ತಾರೆ. ಈ ನಿಟ್ಟಿನಲ್ಲಿ ಕನ್ನಡಿಗರು ಅದೆಷ್ಟೋ ಪಾಲಾಗಿದ್ದಾರೆ. ಇತ್ತೀಚಿಗೆ ಕನ್ನಡದ ಬಲ ಈ ನಿಟ್ಟಿನಲ್ಲಿ ಕಡಿಮೆಯಾಗುತ್ತಿದೆ. ಕಾಸರಗೋಡಿನ ಕನ್ನಡದ ಸರಕಾರಿ ಹುದ್ದೆಗಳು ಜನೆರಲ್ ಹುದ್ದೆಗಳಾಗುತ್ತಿದೆಯೋ...

ಎಲ್ಲೋ ನಮ್ಮನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು