DARK MODE 

ಗುರುವಾರ, ಫೆಬ್ರವರಿ 01, 2018

ಸ್ಕೌಟ್ ಶಿಬಿರದ ಅನುಭವಗಳು

        ನಾನೊಬ್ಬ ಸ್ಕೌಟ್ ಎಂದು ನಾನು ಹೆಮ್ಮೆ ಪಡುತ್ತೇನೆ. ಸ್ಕೌಟಿನ ಚಟುವಟಿಕೆಗಳಲ್ಲಿ ಶಿಬಿರವು ಒಂದು. ನಾನು ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ಇತ್ತೀಚೆಗೆ ನಾನೊಂದು ಸ್ಕೌಟ್ ವಿದ್ಯಾರ್ಥಿಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿದೆನು. ಮೂರು ರಾತ್ರಿ ಸೇರಿ ಒಟ್ಟು ನಾಲ್ಕು ದಿನಗಳ ಶಿಬಿರ. ಶಿಬಿರಕ್ಕೆ ಆಗಮಿಸಿದ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ೯ ಮಂದಿಯ ತಂಡಗಳಾಗಿ ಮಾಡಲಾಯಿತು. ನನ್ನ ಶಾಲೆಯಿಂದ ಬಂದಿದ್ದ ಇತರ ಐವರು ಬೇರೆಬೇರೆ ಗುಂಪುಗಳಲ್ಲಿ ಸೇರಿಹೋದರು. ಮನಸ್ಸಲ್ಲಿ ನಿರಾಶೆಯ ಭಾವನೆ ಬಂದರು ಹೊಸ ಗೆಳೆಯರ ಮುಖ ಮನಸ್ಸಿಗೆ ಮುದ ನೀಡಿತು. ನನ್ನ ಗುಂಪಿನಲ್ಲಿ ಹಲವು ಭಾಷೆ ಮಾತನಾಡುವ ಮಕ್ಕಳಿದ್ದರು. ಹಲವು ಶಾಲೆಗಳಿಂದ ಬಂದ ವಿವಿಧ ಊರುಗಳ ಮಕ್ಕಳಾಗಿದ್ದರು. ನಾವೆಲ್ಲಾ ಬಹಳ ಬೇಗನೆ ಹೊಂದಿಕೊಂಡೆವು. ಎಲ್ಲರಿಗೂ ತಿಳಿದ ಭಾಷೆಯಾದ ಮಲಯಾಳಂನಲ್ಲಿ ನಾವು ಮಾತನಾಡಿಕೊಂಡೆವು.

          ರಾತ್ರಿಯ ಶಿಬಿರಾಗ್ನಿಯಲ್ಲಿ ನಮ್ಮ ತಂಡವು ಜಾನಪದ ಹಾಡುಹಾಸ್ಯ ನಾಟಕಗಳನ್ನು  ವೀಕ್ಷಕರ ಹೃದಯಗಳಲ್ಲಿ ಸ್ಥಾನವನ್ನು ಪಡೆದುಕೊಂಡೆವು. ಎರಡನೆಯ ದಿನ ಎರಡು ತಂಡಗಳು ಸೇರಿಕೊಂಡು "ಸ್ಕೌಟ್  ವನ ವಿದ್ಯಾ ಸಂಕೇತ"ವನ್ನು ಆಧರಿಸಿ ಒಂದು ಸಾಹಸಿಕ ಯಾತ್ರೆ ನಡೆಯಿತು. ಹಿಂದೆಂದೂ ಕಾಣದ ಸ್ಥಳದಲ್ಲಿ ಯಾರ ಸಹಾಯವೂ ಇಲ್ಲದೆ ನಾವು ತುಂಬ ದೂರದ ವರೆಗೂ ನಡೆದುಕೊಂಡೇ ಹೋದೆವು. ಗ್ರಾಮದ ಹಲವಾರು  ದೃಶ್ಯಗಳನ್ನು ಕಣ್ಣಾರೆ ಕಂಡು ಸಂತಸಪಟ್ಟೆವು. ದಾರಿಯಲ್ಲಿ ಹಲವಾರು ಔಷಧ ಸಸ್ಯಗಳನ್ನು ಕಂಡೆವು. ೪೫ ನಿಮಿಷಗಳ ಬಳಿಕ ಶಿಬಿರಕ್ಕೆ ತಲುಪಿದೆವು.

        ನಂತರದ ದಿನಗಳಲ್ಲಿ ಅಧ್ಯಾಪಕರ ಹಾಡುಕತೆಹಾಸ್ಯಗಳೊಂದಿಗೆ ಈ ತರಬೇತಿ ಶಿಬಿರದ ಪಾಠಗಳು ನಡೆದವು. ಶಿಬಿರ ಕೊನೆಗೊಳ್ಳುವ ದಿನದಂದು ನಾವೆಲ್ಲಾ ಬಿಟ್ಟಿರಲಾರದಷ್ಟು ಆಪ್ತರಾಗಿದ್ದೆವು. ನಂತರ ನಾವು ಇನ್ನೊಮ್ಮೆ ಭೇಟಿಯಾಗುವ ಪ್ರತೀಕ್ಷೆ ಯಿಂದ ಪರಸ್ಪರ ಹಸ್ತ ಲಾಘವ ಮಾಡಿ ಶಿಬಿರಕ್ಕೆ ಧನ್ಯವಾದ ಅರ್ಪಿಸಿ ಸಂತಸದಿಂದ ನಮ್ಮ ಊರಿನತ್ತ ಪ್ರಯಾಣ ಬೆಳೆಸಿದೆನು. ಈ ಶಿಬಿರದ ಅನುಭವ ನನಗೆ ಎಂದೆಂದೂ ಮರೆಯಲು ಸಾಧ್ಯವಿಲ್ಲ .




                                                                                                                 

                                                                                                           -- .ಕೆ.ಜೆ.  (2014)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು