ಕೆಲಸವೆಂದರೆ ಸರಕಾರಿ ಕೆಲಸವೇ ಬೇಕು...!
ಅನುದಾನಗಳು ಸರಕಾರದಿಂದ ರಾಶಿ ರಾಶಿ ಬೇಕೇಬೇಕು...!
ವಿದ್ಯಾರ್ಥಿ ವೇತನಗಳು ಬೇಕು ಸರಕಾರದಿಂದ ಸಾವಿರಗಟ್ಟಲೆ...!
ನಿವೃತ್ತಿ ವೇತನಗಳು ಇಮ್ಮಡಿಗೊಳಿಸುತ್ತೇವೆ ಸರಕಾರದೊಂದಿಗಿನ ಹೋರಾಟದ ಮೂಲಕ...!
ಎಲ್ಲ ಅನುದಾನಗಳುಬೇಕು ಸರಕಾರದಿಂದ......!
ಆದರೆ ಯಾಕೆ ಬೇಡ ಸರಕಾರಿ ಶಾಲೆ...!
ಯಾಕೆ ಬೇಡ ಕನ್ನಡ ಮಾಧ್ಯಮ
ನಮಗೆ ಮಾತೃಭಾಷೆ ಎಂಬ ಆಧಾರದಲ್ಲಿ ಕನ್ನಡ ಕಲಿಯುವ ಅವಕಾಶ ಇರುವುದು ಕೇವಲ ಪ್ರೌಢ ಶಿಕ್ಷಣದ ಹಂತದ ತನಕ ಮಾತ್ರವಾಗಿದೆ. ಪ್ರೌಢ ಶಿಕ್ಷಣದ ಬಳಿಕದ ಉನ್ನತ ಶಿಕ್ಷಣವು ಸಾಮಾನ್ಯವಾಗಿ ಜಗತ್ತಿನೆಲ್ಲೆಡೆ ಆಂಗ್ಲ ಮಾಧ್ಯಮದಿಂದ ಅವಲಂಬಿತವಾಗಿದೆ. ಆದ್ದರಿಂದ ಕನ್ನಡ ಕಲಿಯುವ ಸದಾವಕಾಶವನ್ನು ನಾವು ಯಾಕೆ ಸರಿಯಾಗಿ ವಿನಿಯೋಗಿಸಿಕೊಳ್ಳಬಾರದು.
ಕನ್ನಡವನ್ನು ಉಳಿಸಿ...ಕನ್ನಡವನ್ನು ಬೆಳೆಸಿ.
ಸರಕಾರಿ ಶಾಲೆಗಳನ್ನು ಸಂರಕ್ಷಿಸಿ...ಕನ್ನಡ ಮಾಧ್ಯಮವನ್ನು ಬೆಳೆಸಿರಿ.
ಸಿರಿಗನ್ನಡಂ ಗೆಲ್ಗೆ...ಕನ್ನಡ ಮಾಧ್ಯಮಂ ಬಾಳ್ಗೆ.
ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ಕಾಮೆಂಟ್ ರೂಪದಲ್ಲಿ ಪ್ರಕಟಿಸಿರಿ.
ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ಕಾಮೆಂಟ್ ರೂಪದಲ್ಲಿ ಪ್ರಕಟಿಸಿರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ