DARK MODE 

ಬುಧವಾರ, ಅಕ್ಟೋಬರ್ 31, 2018

62ನೇ ಕನ್ನಡ ರಾಜ್ಯೋತ್ಸವ

ಎಲ್ಲಾ ಕನ್ನಡ ಅಭಿಮಾನಿಗಳಿಗೂ 62ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು.

ಕನ್ನಡ ಭಾಷೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಆಸ್ತಿಯಲ್ಲ. ಕನ್ನಡ ಜಗತ್ತಿನಾದ್ಯಂತವಿರುವ ಕನ್ನಡ ಅಭಿಮಾನಿಗಳ ಆಸ್ತಿ. ಕನ್ನಡಕ್ಕೆ ಉಜ್ವಲವಾದ ಭವಿಷ್ಯವಿದೆ. ಸಹಸ್ರ ವರ್ಷಗಳ ಈಚೆಗೂ ಕನ್ನಡ ಪ್ರಬಲವಾಗಿದೆ ಎಂದಾದರೆ ಕನ್ನಡದ ಉಳಿವಿಗೆ ಮುಂಬರುವ ದಿನಗಳು ಸವಾಲೊಡ್ಡಲು ಸಾಧ್ಯವೇ?

ಇಂಗ್ಲೀಷ್ ಎಂಬ 26 ಅಕ್ಷರಗಳ ಭಾಷೆ ಕನ್ನಡತನವನ್ನು ಅಳಿಸಲು ಪ್ರಯತ್ನಿಸುತ್ತಿದೆ ಎನ್ನುವುದು ಅಸಂಬಂಧವೇ ಸರಿ. ಇಂಗ್ಲೀಷ್ ಕನ್ನಡಕ್ಕಿಂತ ಬಹು ವೇಗವಾಗಿ ಆಧುನೀಕರಣಕ್ಕೆ, ಅದರಲ್ಲೂ ಮಾಹಿತಿ ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿರುವುದೇ ಇಂಗ್ಲೀಷಿನ ಹೊಳಪಿಗೆ ಕಾರಣ.

ಆದ್ದರಿಂದ ಕನ್ನಡದ ಏಳಿಗೆಗೆ ನೀವು ಪ್ರಯತ್ನಿಸುವಿರಾದರೆ,
  • ನಿಮ್ಮ ಮೊಬೈಲ್, ಕಂಪ್ಯೂಟರ್ ಮುಂತಾದವುಗಳಲ್ಲಿ ಕನ್ನಡ ಭಾಷೆಯನ್ನು ಹಿನ್ನೆಲೆ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಿರಿ.
  • ನಿಮ್ಮ ಮೊಬೈಲ್‍ನ ಸಂಪರ್ಕ ಪಟ್ಟಿಗಳಲ್ಲಿನ ಹೆಸರುಗಳನ್ನು ಸಾಧ್ಯವಾದಷ್ಟು ಕನ್ನಡದಲ್ಲಿ ಬರೆದುಕೊಳ್ಳಿ.
  • ನಿಮ್ಮ ಕನ್ನಡಿಗರಾದ ಗೆಳೆಯರಿಗೆ ಇ-ಸಂದೇಶ ರವಾನಿಸುವಾಗ ಕನ್ನಡದಲ್ಲಿ ಮುದ್ರಿಸಲು ಆದ್ಯತೆ ನೀಡಿರಿ.
  • ನೀವೊಬ್ಬ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿ ತಂತ್ರಜ್ಞಾನಿಯಾದರೆ, ಕಂಪ್ಯೂಟರಿನ ಮೂಲಭೂತ ಪ್ರೋಗ್ರಾಮಿಂಗ್ ವ್ಯವಸ್ಥೆಯಲ್ಲೇ ಕನ್ನಡ ಬಳಸಲು ವೇದಿಕೆ ನಿರ್ಮಿಸಲು ಯತ್ನಸಿರಿ.
  • ಕನ್ನಡವನ್ನು ಆಧುನೀಕರಣಗೊಳಿಸುವುದು ಕಷ್ಟದ ಕಾರ್ಯವೇನೂ ಅಲ್ಲ. ಆದರೆ ಇಲ್ಲಾ ಕನ್ನಡಿಗರ ಭಾಗವಹಿಸುವಿಕೆ ಅನವಾರ್ಯ.


ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿರಿ. ಗಡಿನಾಡೇ ನಮಗೆ ಆಸರೆ...ಆಗುತಿದೆ ನಮಗಿಲ್ಲಿ ನಿಂದನೆ. ಅಖಂಡ ಕರ್ನಾಟಕದ ಕನಸು ಈ ನಾವು ಗಡಿನಾಡ ಕನ್ನಡಿಗರ ಹೊರತು ಪಡಿಸಿ ಅಸಂಪೂರ್ಣ.

ಸಿರಿಗನ್ನಡಂ ಗೆಲ್ಗೆ...ಸಿರಿಗನ್ನಡಂ ಬಾಳ್ಗೆ...
ಸಿರಿಗನ್ನಡಂ ಗೆಲ್ಗೆ...ಗಡಿನಾಡು ಬಾಳ್ಗೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು