DARK MODE 

ಶುಕ್ರವಾರ, ಸೆಪ್ಟೆಂಬರ್ 27, 2019

ನಿಮ್ಮ ಕೈಯಲ್ಲಿದೆ ಆಧುನಿಕ ಕನ್ನಡ


ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ...
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ‌ ಪಾಂಚಜನ್ಯ ಮೊಳಗುತ್ತದೆ...
ಕನ್ನಡಕ್ಕಾಗಿ ಕಿರುಬೆರಳೆತ್ತಿದರೆ ಸಾಕು, ಅದೇ ಗೋವರ್ಧನ ಗಿರಿ ಧಾರಿಯಾಗುತ್ತದೆ...

ಕವಿವಾಣಿ ಸತ್ಯ ಎಂಬುದು ಇಂದಿನ ವರ್ತಮಾನ ನಮಗೆ‌ ಸಾಬೀತುಪಡಿಸುತ್ತಿದೆ. ಕನ್ನಡ ಕ್ರಾಂತಿಯೊಂದೇ ಕನ್ನಡದ ಉಳಿವಿಗೆ ಏಕೈಕ ದಾರಿ. ಕ್ರಾಂತಿ ಎಂದರೆ ಅಕ್ರಮ ಎಂದಲ್ಲ. ಕ್ರಾಂತಿ ಎಂದರೆ ಬದಲಾವಣೆ. ಆಧುನಿಕ‌‌ತೆಯಲ್ಲಿ ಕನ್ನಡ ಏನೂ ಹಿಂದೆಯಿಲ್ಲ...‌ ಆದರೆ ಕನ್ನಡ ಆಧುನಿಕತೆಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ‌ ಕಾಸರಗೋಡಿನ ಅಚ್ಚ ಕನ್ನಡ ಪ್ರದೇಶಗಳು, ಶಾಲೆಗಳು, ಸ್ಥಳಗಳ ಹೆಸರು ಗೂಗಲ್‌ ಮ್ಯಾಪ್‌ಗಳಲ್ಲಿ ಬಹುಪಾಲು ಮಲೆಯಾಳಂ ನಲ್ಲಿದೆ. ಗೂಗಲ್ ಮ್ಯಾಪ್ ನಲ್ಲಿ ಇಂಗ್ಲಿಷ್ ನೊಂದಿಗೆ ಕನ್ನಡ ಮತ್ತು ಮಲೆಯಾಳಂ ನಲ್ಲಿ ಹೆಸರನ್ನು ನೀಡಲು ಅವಕಾಶ ಇದೆ. ನಮ್ಮ ಪ್ರದೇಶದ ಗೂಗಲ್ ಮ್ಯಾಪ್‌ಗಳಲ್ಲಿ ಕನ್ನಡ ಇರಬೇಕಾದ ಅಗತ್ಯ ಎಂದರೆ ಅದು ಕನ್ನಡಿಗರ ಅಸ್ತಿತ್ವದ ಸಂಕೇತಿಗೆ ಗುರುತು ಅಷ್ಟೇ... ಆದರೆ ಹನಿಗೂಡಿ ಹಳ್ಳ ಎಂಬಂತೆ‌ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಬಳಸುವುದು ಮತ್ತು ವಾಟ್ಸಪ್, ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ತಾಣಗಳ ಪ್ರದರ್ಶನ ಭಾಷೆ ಕನ್ನಡದಲ್ಲಿ ಮಾಡವುದು ಆಧುನಿಕ ಕ್ರಾಂತಿ.

#ಕನ್ನಡ_ಕ್ರಾಂತಿ
#ಸಿರಿಗನ್ನಡಂ_ಗೆಲ್ಗೆ_ಗಡಿನಾಡು_ಬಾಳ್ಗೆ
#ಕನ್ನಡ_ಕಾಸರಗೋಡು
#KasaragodKannadaUlisi
#ಕಾಸರಗೋಡು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು