#ಕನ್ನಡ_ಕ್ರಾಂತಿ
#ಕನ್ನಡ_ಕಾಸರಗೋಡು
#ಸಿರಿಗನ್ನಡಂ
ಸಾಮಾಜಿಕ ತಾಣಗಳಲ್ಲಿ ಕನ್ನಡ ಬಳಸೋಣ...
ಕನ್ನಡ ಉಳಿಸೋಣ...
ಇಂಗ್ಲಿಷರು ವಾಟ್ಸಪ್ ಫೇಸ್‌ಬುಕ್ ಮೊದಲಾದ ಜಾಲತಾಣಗಳಲ್ಲಿ ಕನ್ನಡ ಬಳಸಲು ಅವಕಾಶ ನೀಡಿದ್ದಾರೆ. ಆಂಡ್ರೋಯ್ಡ್ ಮೊಬೈಲ್ ಗಳು ಸಂಪೂರ್ಣವಾಗಿ ಕನ್ನಡವನ್ನು ಬೆಂಬಲಿಸುತ್ತಿದೆ. ಮೊಬೈಲ್ ಗಳು ನಮ್ಮೊಂದಿಗೆ ಕನ್ನಡದಲ್ಲೇ ವ್ಯವಹರಿಸುವಷ್ಟು ಬೆಳೆದಿದೆ. ಆದರೆ ನಾವು ಮಾತ್ರ ನಮಗೆ ಉಚಿತವಾಗಿ ಲಭಿಸುತ್ತಿರುವ ಅವಕಾಶವನ್ನು ಕಡೆಗಣಿಸಿತ್ತಿದ್ದೇವೆ. ಜಾಲತಾಣಗಳಲ್ಲಿ ಕನ್ನಡ ಟೈಪ್ ಮಾಡಲು ನಾವು ಯಾಕೆ ಹಿಂಜರಿಯುತ್ತಿದ್ದೇವೆ...? ವಾಟ್ಸಪ್ ನ ಆ್ಯಪ್ ಭಾಷೆ ಕನ್ನಡ ಮಾಡಿದ್ರೆ ಅಥವಾ ಆಂಡ್ರಾಯ್ಡ್ ಫೋನಿನ ಭಾಷೆ ಸಂಪೂರ್ಣವಾಗಿ ಕನ್ನಡ ಮಾಡಿದರೆ ಏನೂ ಅರ್ಥ ಆಗುವುದಿಲ್ಲ ಎಂದು ಕನ್ನಡ ಬಲ್ಲ ಕನ್ನಡಿಗರಾದ ನಾವು ಯಾಕೆ ತಲೆ ತುರಿಸುತ್ತೇವೆ..? ಕನ್ನಡವೇ ಉಸಿರು ಎಂದು ಹೇಳುವಾಗ ನಮ್ಮ ಮೊಬೈಲ್ ನಲ್ಲಿರುವ ಸಂಪರ್ಕ ಪಟ್ಟಿಯ ಹೆಸರು ಮಾತ್ರ ಯಾಕೆ ಕಂಗ್ಲೀಷ್ ಅಥವಾ ಇಂಗ್ಲಿಷ್ ನಲ್ಲಿದೆ...? ಇವೆಲ್ಲವೂ ಪ್ರಾಯೋಗಿಕ... ಆದರೂ ನಾವು ಕಷ್ಟ, ನಮ್ಮಿಂದ ಅಸಾಧ್ಯ ಎನ್ನುತ್ತೇವೆ.
ಕನ್ನಡ ಬಳಸುವ ಅವಕಾಶಗಳನ್ನು ವಂಚಿಸುತ್ತಾ ನಾವು ಭಾಷಾ ಹೇರಿಕೆ ಎನ್ನುವುದು ಸರಿಯೇ..? ನಮಗೆ ಅನ್ಯಾಯ ಆಗುತ್ತಿದೆ ಎನ್ನುವುದು ಸರಿಯೇ...? ಮೊದಲು ನಾವು ನಮ್ಮ ಭಾಷೆಯ ಬಗ್ಗೆ ನಿಷ್ಠಾವಂತರಾಗೋಣ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ