DARK MODE 

ಬುಧವಾರ, ಅಕ್ಟೋಬರ್ 23, 2019

ಹೃದಯವಂತ ಕನ್ನಡಿಗ...


ಫೆಬ್ರವರಿ 21 ರಂದು ಕೇರಳ ಲೋಕಸೇವಾ ಆಯೋಗ ನಡೆಸಿದ ಎಲ್.ಡಿ ಕ್ಲರ್ಕ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ಆಯೋಗದ ಪ್ರಕಟನೆಯಂತೆ 2:2:1 ಅನುಪಾತದಲ್ಲಿ ಕನ್ನಡ : ಮಲೆಯಾಳಂ : ಇಂಗ್ಲೀಷ್ ಭಾಷೆಯ ಪ್ರಶ್ನೆ ಇರಬೇಕಿತ್ತು. ಆದರೆ ನಡೆದ ಪರೀಕ್ಷೆಯಲ್ಲಿ 1 : 3 : 1 ಅನುಪಾತದಲ್ಲಿ ಕನ್ನಡ : ಮಲೆಯಾಳಂ : ಇಂಗ್ಲೀಷ್ ಪ್ರಶ್ನೆಗಳನ್ನು ಕೇಳಲಾಗಿದೆ. ಅಂದರೆ, ಕನ್ನಡ ಮತ್ತು ಮಲೆಯಾಳಂ ಬಲ್ಲ ಒಬ್ಬ ಕನ್ನಡಿಗನಿಗೆ ಎಲ್ಲಾ ಕನ್ನಡ ಮತ್ತು ಇಂಗ್ಲೀಷ್ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ ೪೦ ಶೇಕಡಾ ಅಂಕ ಪಡೆಯಬಹುದು. ಉಳಿದ ೬೦ ಶೇಕಡಾ ಅಂಕಗಳನ್ನು ಪಡೆಯಲು ಆತನಿಗೆ ಅಲ್ಪ-ಸ್ವಲ್ಪ ಪರಿಜ್ಞಾನ ( ಬಹುಪಾಲು ಕಾಸರಗೋಡಿನ ಕನ್ನಡಿಗರು ಮಲೆಯಾಳಂ ನಲ್ಲಿ ಅನಾಯಾಸವಾಗಿ ಮಾತನಾಡಬಲ್ಲರು, ಅರ್ಥೈಸಬಲ್ಲರೂ, ಅಗತ್ಯ ಬಂದರೆ ಮಲೆಯಾಳಂ ನಿಂದ ಕನ್ನಡಕ್ಕೆ ಅನುವಾದ‌ಮಾಡಬಲ್ಲರು.... ಆದರೆ ಮಲೆಯಾಳಂ ವ್ಯಾಕರಣದ ಲಿಖಿತ ಪರೀಕ್ಷೆ ಅಷ್ಟು ಸುಲಭವಲ್ಲ...) ಇರುವ ಮಲೆಯಾಳಂ ಪ್ರಶ್ನೆಗಳನ್ನೇ ಆಶ್ರಯಿಸಬೇಕು.‌ ಆದರೆ ಮಲೆಯಾಳಂ ಮಾತ್ರ ಬಲ್ಲ ಅಭ್ಯರ್ಥಿಗಳು ಮಲೆಯಾಳಂ ಮತ್ತು ಇಂಗ್ಲೀಷ್ ಪ್ರಶ್ನೆಗಳಿಂದ ೬೦ ಶೇಕಡಾ ಅಂಕ ಪಡೆದು ಸುಲಭವಾಗಿ ರ‌್ಯಾಂಕ್ ಪಡೆಯಬಲ್ಲರು... ಇದರ ಫಲವಾಗಿ ಕಾಸರಗೋಡಿನ ಕನ್ನಡ ಮತ್ತು ಮಲೆಯಾಳಂ ಬಲ್ಲ ಕ್ಲರ್ಕ್ (ಗುಮಾಸ್ತ) ಹುದ್ದೆಗಳು ಮಲೆಯಾಳಂ ಮಾತ್ರ ಬಲ್ಲವರ ಪಾಲಾಗುವ ಸುನಿಶ್ಚಿತ....
ಕನ್ನಡ ಶಾಲೆಗಳಲ್ಲಿ ಕನ್ನಡ ಬಾರದ ಅಧ್ಯಾಪಕರ ನೇಮಕವಾದಾಗ ಆ ಶಾಲೆಯ ವಿಧ್ಯಾರ್ಥಿಗಳು ಪ್ರಶ್ನಿಸಿದರು..., ಆದರೆ ಸರಕಾರಿ ಕಛೇರಿಗಳಲ್ಲಿ ಕನ್ನಡ ಬಾರದವರ ನೇಮಕವಾದಾಗ ಯಾರು ಪ್ರಶ್ನಿಸಿಯಾರು...?
ಕಾಸರಗೋಡಿನ ಕನ್ನಡಿಗರ ಭವಿಷ್ಯ ಹೇಳಲು ಜ್ಯೋತಿಷಿಗಳ ಅಗತ್ಯವಿಲ್ಲ.... ಒಬ್ಬ ಪ್ರೌಢಶಾಲಾ ವಿಧ್ಯಾರ್ಥಿ ಸಾಕು....
ಇತಿ,
ವಿಶಾಲ ಹೃದಯಿ ಕನ್ನಡಿಗ
ಕನ್ನಡ ಕಾಸರಗೋಡು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು