DARK MODE 

ಶುಕ್ರವಾರ, ನವೆಂಬರ್ 01, 2019

ನವೆಂಬರ್ ೧ ಕರಾಳ ದಿನ...!

ಕನ್ನಡಿಗರ ಪಾಲಿನ ಕರಾಳ ದಿನ... ನವೆಂಬರ್ ೧
ಬಹುಪಾಲು ಕನ್ನಡಿಗರ ಪಾಲಿಗೆ ನವೆಂಬರ್ ೧ ಎಂದರೆ ರೋಮಾಂಚನ... ಸ್ವಾತಂತ್ರ್ಯ ದಿನದಂತೆ ಅದೆಂತಹದೋ ಉತ್ಸಾಹ... ಮದರಾಸು ಪ್ರಾಂತ್ಯದ ಕೇಂದ್ರೀಕೃತವಾದ ಆಡಳಿತದಿಂದ ಕನ್ನಡ ನಾಡು ಕರ್ನಾಟಕ ಸ್ವತಂತ್ರವಾಯಿತು. ಆದರೆ ಅದು ಅಖಂಡ ಕರ್ನಾಟಕವಲ್ಲ ಎಂಬುದೇ ಕಹಿ ವಾಸ್ತವ. ಸ್ವಾತಂತ್ರ್ಯೋತ್ತರ ಭಾರತದ ವೈವಿಧ್ಯಮಯ ಸಂಸ್ಕೃತಿಗಳ ಏಕೀಕರಣಕ್ಕಾಗಿ ಮತ್ತು ಆಡಳಿತಕ್ಕೆ ಭಾಷಾವಾರು ಪ್ರಾಂತಗಳ ರಚನೆ ಅಗತ್ಯವಾಗಿತ್ತು ಎಂಬುದಕ್ಕೆ ಇಂದಿಗೂ ಎರಡನೇ ಮಾತಿಲ್ಲ.. ಆದರೆ ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಅನೇಕ‌ ನಷ್ಟಗಳನ್ನು ಸಹಿಸಿಕೊಂಡ ಪ್ರಾಂತ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ.

ಗೋವ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಐದು ಪ್ರಾಂತ್ಯಗಳೊಂದಿಗೆ ಕರ್ನಾಟಕ ಗಡಿಯನ್ನು ಹಂಚಿಕೊಂಡಿದೆ. ಆದರೆ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಗಡಿಭಾಗದ ಕನ್ನಡಿಗರು ಅನ್ಯಾಯವಾಗಿ ಹೊರರಾಜ್ಯ ಸೇರಿಕೊಂಡರು. ನಮ್ಮ ರಾಷ್ಟ್ರದ ಅಭಿವೃದ್ಧಿಯ ಇತಿಹಾಸದಲ್ಲಿ ನವೆಂಬರ್ ೧ ಎಂಬುದು ಒಂದು ಮೈಲಿಗಲ್ಲೇ ಸರಿ. ಆದರೆ ನಾವು ಬಹುಸಂಖ್ಯಾತರೆಂದು ಹೇಳಿಕೊಳ್ಳಬೇಕಾದ ಕನ್ನಡಿಗರು ಕರ್ನಾಟಕದ ಹೊರರಾಜ್ಯಗಳಲ್ಲಿ ಅಲ್ಪಸಂಖ್ಯಾತರೆನಿಸಿಕೊಂಡಿದ್ದಾರೆ. ಕೇಂದ್ರೀಯ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಮಂತ್ರಾಲಯವು ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರ ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಸೇರಿಸಿಕೊಂಡಿದೆ, ಧಾರ್ಮಿಕ ಅಲ್ಪಸಂಖ್ಯಾತರ ಕಲ್ಯಾಣ ಮಾತ್ರ ಗುರಿಯಾಗಿಸಿದೆ. ಆದರೆ ಕನ್ನಡ ಅಲ್ಪಸಂಖ್ಯಾತರ ಸ್ಥಿತಿಯೇನು...? ಕರ್ನಾಟಕದ ಗಡಿಗೆ ಸೇರಿದ ಹೊರರಾಜ್ಯಗಳ ಕನ್ನಡಿಗರು ತಮ್ಮ ಸ್ವಂತ ಇಚ್ಛೆಯಿಂದ ಕರ್ನಾಟಕ ರಾಜ್ಯದಿಂದ ಹೊರಗುಳಿಯಲಿಲ್ಲ‌... ಭಾಷಾವಾರು ಪ್ರಾಂತ್ಯ ರೂಪೀಕರಣ ಸಮಿತಿಯಲ್ಲಿದ್ದ ಅಧಿಕಾರಿಗಳ ಸ್ವಾರ್ಥದಿಂದ ಅಥವಾ ಅನ್ಯಾಯ ನೀತಿಯಿಂದ ಮಾತ್ರ ಗಡಿ ನಿರ್ಣಯದಲ್ಲಿ ಅವಾಂತರ ಆಗಿದೆ.

ಆದರೆ ಕಾಸರಗೋಡಿನ ಕನ್ನಡಿಗ ತಾನು ಕೇರಳದಲ್ಲಿದ್ದರೂ ಕನ್ನಡಿಗನೆಂಬ ನೆಲೆಯಲ್ಲಿ ತನಗೆ ಸಿಗಬೇಕಾದ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಕೇರಳ ಸರಕಾರದಿಂದ ಪಡೆಯಬೇಕು ಎನ್ನುತ್ತಾನೆ..... ನ್ಯಾಯವಲ್ಲವೇ...?

ಕಾಸರಗೋಡಿನ ಕನ್ನಡಿಗ ಸರಕಾರಕ್ಕೆ ನೀಡುವ ತೆರಿಗೆಯಲ್ಲಿ ಯಾವುದೇ ವಿವೇಚನೆ ಇಲ್ಲ...‌ ಆದರೆ ಕನ್ನಡಿಗರ ಸಾಂವಿಧಾನಿಕ ಹಕ್ಕುಗಳನ್ನು ಖಾತರಿಪಡಿಸುವಲ್ಲಿ ಮಾತ್ರ ವಿವೇಚನೆ ಯಾಕೆ...?

ಅಖಂಡ ಕರ್ನಾಟಕ ಕನಸಾಗಿಯೇ ಇರುವಾಗ, ಗಡಿನಾಡ ಕನ್ನಡಿಗ ನ್ಯಾಯಕ್ಕಾಗಿ ಸರಕಾರದ ಕಛೇರಿಗಳಲ್ಲಿ ಅಥವಾ ರಸ್ತೆ ಬದಿಯಲ್ಲಿ ಧರಣಿ ನಡೆಸುತ್ತಿರುವಾಗ ಇಂದು ಕರಾಳ‌ ದಿನವಲ್ಲದೆ ಮತ್ತಿನ್ನೇನು...😔

2 ಕಾಮೆಂಟ್‌ಗಳು:

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು