DARK MODE 

ಗುರುವಾರ, ನವೆಂಬರ್ 21, 2019

ಕೇರಳ ರಾಜ್ಯ ಶಾಲಾ ಕಲೋತ್ಸವ-2019


ಕೇರಳ ರಾಜ್ಯ ಶಾಲಾ ಕಲೋತ್ಸವದ ದಿನಗಳು ಸನ್ನಿಹಿತವಾಗಿದೆ. ನವೆಂಬರ್ 28 ರಂದು ಕೇರಳ ಮುಖ್ಯಮಂತ್ರಿಗಳು ಕಲೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ. 28 ವರ್ಷದ ಬಳಿಕ ಕಾಸರಗೋಡು ತಲುಪಿದ ಕೇರಳದ ಕಲಾಹಬ್ಬ ಕನ್ನಡಿಗರನ್ನು ಮರೆತರು ಕಾಸರಗೊಡಿನ ಕನ್ನಡ ಸಂಸ್ಕೃತಿಯನ್ನು ಮರೆತಿಲ್ಲ ಎನ್ನುವುದು ಸ್ವಾಗತಾರ್ಹ.‌‌

ಕಲೋತ್ಸವ ಕಾಞ್ಞಂಗಾಡ್ ಪ್ರದೇಶದ 28 ವೇದಿಕೆಗಳಲ್ಲಾಗಿ ನಡೆಯಲಿದೆ. ಕಲೋತ್ಸವದ ನೀತಿ ಸಂಹಿತೆಯ ಪ್ರಕಾರ ವೇದಿಕೆಗಳಿಗೆ ಸಾಂಸ್ಕೃತಿಕ ನಾಯಕರ ಹೆಸರನ್ನು ನೀಡಲಾಗುತ್ತಿದೆ. 28 ವೇದಿಕೆಗಳ ಪೈಕಿ 3 ವೇದಿಕೆಗಳ ಹೆಸರಿನಲ್ಲಿ ಕನ್ನಡ ಪ್ರಾತಿನಿಧ್ಯ ಕಾಣಬಹುದಾಗಿದೆ.

ಶ್ರೀಲಕ್ಷ್ಮಿ ಆಡಿಟೋರಿಯಂ ಅದಿಯಾಂಬೂರ್‌ನ 10ನೇ ವೇದಿಕೆಗೆ 'ರಾಷ್ಟ್ರಕವಿ ಗೋವಿಂದ ಪೈ', ಪಡನ್ನಕ್ಕಾಡ್ ಕೃಷಿ ಕಾಲೇಜ್-ಒಳಾಂಗಣ ಆಡಿಟೋರಿಯಂನ 13ನೇ ವೇದಿಕೆಗೆ ಕಯ್ಯಾರ ಕಿಞ್ಞಣ್ಣ ರೈ ಮತ್ತು ಚೈತನ್ಯ ಆಡಿಟೋರಿಯಂ ಕಿಳಕ್ಕುಂಕರದ 27ನೇ ವೇದಿಕೆಗೆ ಯಕ್ಷಗಾನದ ಪಿತಾಮಹ 'ಪಾರ್ತಿ ಸುಬ್ಬ' ಅವರ ಹೆಸರನ್ನು ನೀಡಲಾಗಿದೆ.

ತೆಂಕಣ ಕೇರಳೀಯರೂ ಛಲದೊಂದಿಗೆ ಕಾಸರಗೋಡಿನ ತಂಡದೊಂದಿಗೆ ಸ್ಪರ್ಧಿಸುವ ಯಕ್ಷಗಾನ ಸ್ಪರ್ಧೆಯು ನವೆಂಬರ್ 29 ಶುಕ್ರವಾರ ಬೆಳಿಗ್ಗೆ 9.00 ಗಂಟೆಯಿಂದ ಪಡನ್ನಕ್ಕಾಡ್ ಕೃಷಿ ಕಾಲೇಜ್‌ನ 12ನೇ ವೇದಿಕೆಯಾದ 'ಕಣ್ಣನ್ ಪಾಟಾಳಿ' ವೇದಿಕೆಯಲ್ಲಿ ನಡೆಯಲಿದೆ.

Facebook.com/kannadakasaragod

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು