DARK MODE
ಭಾನುವಾರ, ಮೇ 24, 2020
ಕಾಸರಗೋಡಿನ ಚಿತ್ತ, 36ರತ್ತ...
ಇಂದಿಗೆ ಸುಮಾರು 36 ವರ್ಷದ ಹಿಂದೆ. ಅಂದರೆ 1984ರ ಮೇ ತಿಂಗಳ 24 ನೇ ದಿನಾಂಕ. ಗಡಿನಾಡು ಕಾಸರಗೋಡಿನ ಪಾಲಿಗೆ ಅದು ಮರೆಯಲಾಗದ ದಿನ. ಯಾಕೆಂದರೆ 1956ರ ಪ್ರಾಂತ್ಯ ಪುನರ್ವಿಂಗಡನೆಯ ಬಳಿಕ ಕೇರಳ ರಾಜ್ಯವು ಇದೇ ದಿನ ಉತ್ತರ ಭಾಗದ ಸಂಯುಕ್ತ ಪ್ರದೇಶಗಳನ್ನು ವಿಭಜಿಸಿ ಕಾಸರಗೋಡನ್ನು ಹೊಸ ಜಿಲ್ಲೆಯಾಗಿ ಘೋಷಿಸಿತು. 70 ಮತ್ತು 80ರ ದಶಕವು ಕಾಸರಗೋಡಿನ ಕನ್ನಡ ಹೋರಾಟದ ಸಕ್ರೀಯ ಕಾಲವಾಗಿತ್ತು. ಆ ದಿನಗಳಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದ ಕನ್ನಡಿಗರ ಹೋರಾಟದ ಏಕೈಕ ಗುರಿ ಮಹಾಜನ ವರದಿ ಅನುಷ್ಠಾನ ಮಾತ್ರ ಆಗಿತ್ತು. ಆದರೆ 1956ರಲ್ಲಿ ಫಜಲ್ ಅಲಿ ನಿಯೋಗದ ಮೂಲಕ ಕೆ.ಎಂ ಪಣಿಕ್ಕರ್ ತಂದುಕೊಟ್ಟ ಕಾಸರಗೋಡನ್ನು ಕರ್ನಾಟಕಕ್ಕೆ ಬಿಟ್ಟುಕೊಡಲು ಕೇರಳ ರಾಜ್ಯವು ಸಿದ್ದವಿರಲಿಲ್ಲ. ಕಾಸರಗೋಡಿನ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇರಳದ ಆಡಳಿತಶಾಹಿಗಳು ಉತ್ತರ ಕೇರಳದ ಜಿಲ್ಲೆಯನ್ನು ವಿಭಜಿಸಿ ಕಾಸರಗೋಡನ್ನು ಹೊಸ ಜಿಲ್ಲೆಯಾಗಿ ಘೋಷಿಸಿತು. ಆ ಮೂಲಕ ಕಾಸರಗೋಡಿನ ಕನ್ನಡಿಗರ ಹಿತಾಸಕ್ತಿಗಳನ್ನು ತಾವು ಕಾಪಾಡಿಕೊಳ್ಳುವೆವು ಎಂಬ ಹುಸಿ ಭರವಸೆ ಮೂಡಿಸುವ ಯತ್ನ ಮಾಡಿತು. ಆದರೆ ಹೊಸದಾಗಿ ಜಿಲ್ಲೆ ರೂಪುಗೊಂಡಾಗ ಅಲ್ಲಿಯೂ ಕಲಬೆರಕೆ ಕಂಡಿತು. ಏನೆಂದರೆ, ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಪ್ರದೇಶಗಳ ಜೊತೆಗೆ ಮಲೆಯಾಳಂ ಪ್ರದೇಶಗಳನ್ನು ಸಮಪ್ರಮಾಣದಲ್ಲಿ ಬೆರೆಸಿತು. ಆದರೂ ಕನ್ನಡಿಗನಿಗೆ ಅದೊಂದು ತಾತ್ಕಾಲಿಕ ಆಶ್ವಾಸನೆಯೇ ಆಗಿತ್ತು. ಮಂಜೇಶ್ವರವನ್ನು ಒಳಗೊಂಡಿದ್ದ ಅವಿಭಜಿತ ಕಾಸರಗೋಡು ತಾಲೂಕಿಗೆ ಕನ್ನಡ ಭಾಷಾ ಅಲ್ಪಸಂಖ್ಯಾತರ ಪ್ರದೇಶ ಎಂಬ ಸ್ಥಾನ ನೀಡಿ ಕೇರಳ ಸರಕಾರ ಆಜ್ಞೆಯಾಯಿತು. ಇದರ ಪರಿಣಾಮವಾಗಿ ಮಹಾಜನ್ ವರದಿ ಅನುಷ್ಠಾನಕ್ಕಾಗಿ ನಡೆಯುತ್ತಿದ್ದ ಹೋರಾಟ ಅಶಕ್ತವಾಯಿತು. ಇದರ ಪರಿಣಾಮವೆಂಬಂತೆ ಸಾಂಸ್ಕೃತಿಕ ಕನ್ನಡದ ವಿನಾಶ ಆರಂಭವಾಯಿತು. ಕಾಸರಗೋಡಿನ ಕನ್ನಡದ ಕಿಚ್ಚು ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್‌ನ ಭಾಗವಾಯಿತು. ಚುನಾವಣೆ ಬಂದಾಗ ಕಾಸರಗೋಡಿನಲ್ಲಿರುವ ರಾಜಕೀಯ ಪಕ್ಷಗಳ ಪಾಲಿಗೆ ಕನ್ನಡವೇ ಬ್ರಹ್ಮಾಸ್ತ್ರ. ಚುನಾವಣೆ ಕಾಲದಲ್ಲಿ ಕಾಸರಗೋಡು ಕನ್ನಡದ ರಾಜಧಾನಿಯಂತೆಯೂ, ರಾಜಕಾರಣಿಗಳು ಕನ್ನಡ ಕುವರರೋ ಎನ್ನುವಂತೆ ಕಂಗೊಳಿಸುತ್ತಾರೆ. ರಾಜಕೀಯ ಪಕ್ಷಗಳ, ಸ್ಪರ್ಧಿಗಳ ಫೇಸ್‌ಬುಕ್ ಪುಟಗಳು ಕನ್ನಡಮಯವಾಗಿರುತ್ತದೆ. ಅಲ್ಲಿ ಬರೆದ ಕನ್ನಡದ ಅಕ್ಷರಗಳು ವ್ಯಾಕರಣ ಬದ್ಧವಾಗಿರುತ್ತದೆ, ವರ್ಣರಂಜಿತವಾಗಿರುತ್ತದೆ. ಆದರೆ ಆ ನಾಟಕಕ್ಕೆ ಚುನಾವಣೆಯ ಫಲಿತಾಂಶ ಹೊರಬಂದೊಡನೆ ತೆರೆಬೀಳುತ್ತದೆ. ಮತ್ತೆ ಕನ್ನಡ ಎಂದರೆ 'ಎನ್ನಡ' ಎನ್ನುತ್ತಾರೆ. ಕಾಸರಗೋಡು ಎಂದರೆ ಇದು ನಿಮ್ಮ ಕಾಸರಗೋಡು ಅಲ್ಲ...., 'ಕಾಸ್ರೋಡು' ಅಂತ ಹೇಳ್ತಾರೆ. ಆದರೆ ಇಂದು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಕೇಂದ್ರ ಸಮಿತಿಗಳ ಪ್ರಭಾವದಿಂದಾಗಿ ಕನ್ನಡ ಬಾರದ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಗೆಲ್ಲುತ್ತಿದ್ದಾರೆ. ಕಾಸರಗೋಡು ಜಿಲ್ಲೆ ರೂಪೀಕರಣವಾಗಿ 36 ವರ್ಷ ಆದರೂ ಕೇರಳ ಸರಕಾರದಿಂದ ಜ್ಯಾರಿಗೊಳ್ಳುವ ಮಲೆಯಾಳಂ ಭಾಷೆಯ ಸುತ್ತೋಲೆಗಳು, ಆದೇಶಗಳನ್ನು ಕಾಸರಗೋಡಿನ ಕನ್ನಡಿಗರಿಗೆ ತಲುಪಿಸಲು ಯಾವುದೇ ಭಾಷಾಂತರ ಅಕಾಡೆಮಿ ಅಸ್ತಿತ್ವದಲ್ಲಿಲ್ಲ. ಕಾಸರಗೋಡಿನ ಕನ್ನಡಿಗರಿಗೆ ವಿತರಿಸುವ ಆಧಾರ್ ಚೀಟಿಯಲ್ಲಿ ಮಾಹಿತಿ ನಮೂದಾಗಿರುವ ಪ್ರಾದೇಶಿಕ ಭಾಷೆ ಮಲೆಯಾಳಂ. ಪಡಿತರ ಚೀಟಿಯಲ್ಲಿ ಮಾಹಿತಿಗಳೆಲ್ಲಾ ದಾಖಲಾಗಿರುವ ಏಕೈಕ ಭಾಷೆ ಮಲೆಯಾಳಂ, ಪಡಿತರ ಖರೀದಿಸಿದಾಗ ನೀಡುವ ರಸೀದಿಯೂ ಮಲೆಯಾಳಂ ಮಯಂ. ಮತದಾರರ ಗುರುತಿನ ಚೀಟಿಯಲ್ಲೂ ಮಲಯಾಳಂ. ಕೋವಿಡ್-19 ರ ವೇಳೆಯಲ್ಲಿ ಜಿಲ್ಲಾಡಳಿತದಿಂದ ಜನಜಾಗೃತಿ ಮೂಡಿಸುವ ಮಾಹಿತಿಗಳು ಮಲೆಯಾಳಂನಲ್ಲಿ ಪ್ರಕಟವಾಗುತ್ತಿತ್ತು. ಆದರೆ ಕನ್ನಡಿಗರ ಫೇಸ್‌ಬುಕ್ ಬೇಡಿಕೆಗಳ ಪರಿಣಾಮವಾಗಿ ಅಪರೂಪವಾಗಿ ಕೆಲವು ಮಾಹಿತಿಗಳು ಕನ್ನಡದಲ್ಲೂ ಪ್ರಕಟಿಸಲಾರಂಭಿಸಿದರು. ಆದರೆ ಕನ್ನಡ ಮಾಹಿತಿಗಳು ಪ್ರಕಟವಾದಾಗ ಅದು ಕೇರಳದಲ್ಲಿ ಜ್ಯಾರಿಯಲ್ಲಿರುವ ಮಾತೃಭಾಷೆ ಮಲೆಯಾಳಂ ಕಾನೂನಿನ ಉಲ್ಲಂಘನೆ ಎಂಬಂತೆ ಕೇರಳದ ಸಾರ್ವಜನಿಕರು ಕನ್ನಡಿಗರ ಹಿತಾಸಕ್ತಿಗಳನ್ನು ದಮನಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಪ್ರಮುಖ ಪೋಸ್ಟ್‌ಗಳು
-
"ಆನ್ಲೈನ್ ಶಿಕ್ಷಣದ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ ಅಪೂರ್ವಂ ಆ್ಯಪ್ ಯೋಜನೆ ಇದೀಗ ಕೈಬಿಡಲಾಗಿದೆ." ಕೋವಿಡ್-19 ರ ಹಿನ್ನೆಲೆಯಲ್ಲಿ ಕಾಸರಗೋ...
-
ಗಡಿನಾಡು ಕನ್ನಡಿಗ ಪ್ರಮಾಣ ಪತ್ರ ಪಡೆಯಲು ಗಡಿನಾಡು ಕನ್ನಡಿಗರು ಅನುಸರಿಸಬೇಕಾದ ಕ್ರಮಗಳು: ನೀವು ವಾಸವಾಗಿರುವ ಪ್ರದೇಶದ ವ್ಯಾಪ್ತಿಯ ಗ್ರಾಮ ಕಛೇರಿಗೆ ಭೇಟಿ ನೀಡಿ ಕನ್ನಡ ಭ...
-
ಮಹಾಜನ್ ಆಯೋಗ ಮೆಹರ್ ಚಂದ್ ಮಹಾಜನ್ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು. ಮೂಲತಃ ಪಂಜಾಬಿನವರು. ಕೇಂದ್ರ ಸರ್ಕಾರ ಮಹಾರಾಷ್ಟ್ರ ಗಡಿ ವಿ...
-
ಮನಸಿನಲ್ಲಿ ನನ್ನ ಮೇಲೆ ದ್ವೇಷ ಹುಟ್ಟಿತೇ ಬಂಧುಗಳೆ ?... ಯಾಕಿಲ್ಲ ತಾನೆ ? ಭಾರತದ ಇತರ ರಾಜ್ಯಗಳೊಂದಿಗೆ ಕರ್ನಾಟಕ ರಾಜ್ಯ ರೂಪೀಕರಣಗೊಂಡು 62 ವರ್ಷ ತುಂಬಿದ ನವೆಂ...
-
ನಮ್ಮ ಸಹೋದರರೇ ನಮ್ಮ ಗಡಿನಾಡಿನ ಅಸ್ತಿತ್ವವನ್ನು ನಿರಾಕರಿಸಿದರೆ, ತೆಂಕಣರು ನಮ್ಮನ್ನು ಅಂಗೀಕರಿಸುವರೇ.... ಇಲ್ಲಿಯೂ ಇಲ್ಲ... ಮತ್ತೆಲ್ಲಿ...
ಪ್ರಚಲಿತ ಪೋಸ್ಟ್‌ಗಳು
ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ
ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ