ವಿಧಾನ-೧
👉 myaccount.google.com ಈ ಲಿಂಕನ್ನು ತೆರೆಯಿರಿ.
👉 ತೆರೆದು ಬರುವ ವೆಬ್‌ಪುಟದಲ್ಲಿ ಹಲವು ಆಯ್ಕೆಗಳು ಗೋಚರಿಸುತ್ತದೆ.
👉 ವೈಯಕ್ತಿಕ ಮಾಹಿತಿ (Personal Info) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
👉 ಇದೀಗ ಪರದೆಯ (Screen) ಮೇಲೆ ನಿಮ್ಮ ಗೂಗಲ್ ಖಾತೆಯ ಹೆಸರು, ಚಿತ್ರ, ಪಾಸ್‌ವರ್ಡ್ ಇತ್ಯಾದಿ ಮಾಹಿತಿ ಬದಲಾಯಿಸುವ ಆಯ್ಕೆ ಗೋಚರಿಸುತ್ತದೆ.
👉 ಅಗತ್ಯವಾದ ಬದಲಾವಣೆ ಮಾಡಿ ಉಳಿಸಿಕೊಳ್ಳಿರಿ (Save).
ವಿಧಾನ-೨
👉 ಗೂಗಲ್ ಕ್ಲಾಸ್‌ರೂಂ ಅಥವಾ ಯಾವುದಾದರೂ ಗೂಗಲ್‌ನ ಇತರೆ ಆ್ಯಪ್ ತೆರೆಯಿರಿ.
👉 ಪರದೆಯ (Screen) ಯಾವುದಾದರೂ ಬದಿಯಲ್ಲಿ ಮೂರು ಅಡ್ಡಗೆರೆ ಅಥವಾ ನಿಮ್ಮ ಪ್ರೊಫೈಲ್ ಚಿತ್ರ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿರಿ.
👉 ಆಗ ಪ್ರತ್ಯಕ್ಷವಾಗುವ ಆಯ್ಕೆಗಳಲ್ಲಿ ಕೆಳಗೆ Settings ಅಥವಾ Manage your Google account ಎಂಬ ಆಯ್ಕೆ ಇರುವುದು. ಅಲ್ಲಿ ಕ್ಲಿಕ್ ಮಾಡಿ.
👉 ಇದೀಗ ಬರುವ ಆಯ್ಕೆಗಳಲ್ಲಿ Update Photo ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿರಿ.
👉 ಆಗ ಬರುವ ಆಯ್ಕೆಗಳಲ್ಲಿ ವೈಯಕ್ತಿಕ ಮಾಹಿತಿ (Personal Info) ಎಂಬುದನ್ನು ಆಯ್ಕೆ ಮಾಡಿಕೊಳ್ಳಿರಿ.
👉 ಇದೀಗ ಪರದೆಯ (Screen) ಮೇಲೆ ನಿಮ್ಮ ಗೂಗಲ್ ಖಾತೆಯ ಹೆಸರು, ಚಿತ್ರ, ಪಾಸ್‌ವರ್ಡ್ ಇತ್ಯಾದಿ ಮಾಹಿತಿ ಬದಲಾಯಿಸುವ ಆಯ್ಕೆ ಗೋಚರಿಸುತ್ತದೆ.
👉 ಅಗತ್ಯವಾದ ಬದಲಾವಣೆ ಮಾಡಿ ಉಳಿಸಿಕೊಳ್ಳಿರಿ (Save).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ