ನಮ್ಮ ಮಂಗಳೂರು ವಿಶ್ವವಿದ್ಯಾಲಯದ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿರುವುದು ಹಾಗೂ ಸೆಪ್ಟೆಂಬರ್ ೧ ರಿಂದ ಪದವಿ ತರಗತಿಗಳ ಆನ್ಲೈನ್ ತರಗತಿಗಳನ್ನು ನಡೆಸಲು ಕೈಗೊಂಡ ದಿಟ್ಟ ಹೆಜ್ಜೆ ಶ್ಲಾಘನೀಯ.
ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಗಡಿನಾಡ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ಸಲುವಾಗಿ ಕೆಲವು ಬೇಡಿಕೆಗಳು :
೧. ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿದ ಪದವಿ ತರಗತಿಗಳ ಭಾಷಾ ಪಠ್ಯಗಳ ಪಾಠಪುಸ್ತಕಗಳ ಪಿ.ಡಿ.ಎಫ್ ಪ್ರತಿಯನ್ನು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ಬಿಡುಗಡೆಗೊಳಿಸಬೇಕು. (ಸದ್ಯಕ್ಕೆ ಮುದ್ರಿತ ಪ್ರತಿ ಮಾತ್ರ ಲಭ್ಯವಿದೆ, ಗಡಿ ಬಂದ್ ಹಾಗೂ ಕೊರೋನದ ಹಿನ್ನೆಲೆಯಲ್ಲಿ ಮುದ್ರಿತ ಪುಸ್ತಕ ಖರೀದಿ ಸಾಧ್ಯವಾಗುತ್ತಿಲ್ಲ).
೨. ವಿಶ್ವವಿದ್ಯಾಲಯ ಶುಲ್ಕವನ್ನು ಆನ್ಲೈನ್ ಮೂಲಕ ನೇರವಾಗಿ ಪಾವತಿಸಲು ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸುಬೇಕು. (ಸದ್ಯಕ್ಕೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಮೂಲಕ ವಿದ್ಯಾರ್ಥಿಗಳು ನೇರ ನಗದು ಪಾವತಿ ಮಾಡಬೇಕು)
೩. ಆನ್ಲೈನ್ ತರಗತಿಗಳ ಗುಣಮಟ್ಟವನ್ನು ಪರಿಶೀಲಿಸಲು ಮತ್ತು ಮೂಲಕ ವಿದ್ಯಾರ್ಥಿಗಳ ಹಿತವನ್ನು ಕಾಪಾಡಲು ಸೂಕ್ತ ವ್ಯವಸ್ಥೆ ಏರ್ಪಡಿಸಬೇಕು.
೪. ಸಾಧ್ಯವಾದರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಆನ್ಲೈನ್ ಶಿಕ್ಷಣವನ್ನು ಏಕೀಕರಣ ಮಾಡಿಕೊಂಡು, ಯೂಟ್ಯೂಬ್ ಅಥವಾ ಇನ್ನಿತರೆ ಮಾಧ್ಯಮಗಳ ಮೂಲಕ ವಿತರಿಸಬೇಕು.
೫. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಆನ್ಲೈನ್ ಶಿಕ್ಷಣ ಪರಿಕರಗಳು/ಸಂಪನ್ಮೂಲಗಳು/ಪ್ರಸಾರಾಂಗ ಪ್ರಕಟಿಸಿದ ಪುಸ್ತಕಗಳ ಪಿ.ಡಿ.ಎಫ್ ಪ್ರತಿ ಮೊದಲಾದವುಗಳನ್ನು ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬೇಕು.
ಸೆಪ್ಟೆಂಬರ್ ಒಂದರಿಂದ ಪದವಿ ತರಗತಿಗಳು ಆರಂಭವಾಗುವ ಹಿನ್ನೆಲೆಯಲ್ಲಿ ಡಿಜಿಟಲ್ ಪಠ್ಯಪುಸ್ತಕಗಳನ್ನು ಆಗಸ್ಟ್ ತಿಂಗಳ ಅಂತ್ಯದಲ್ಲೇ ಬಿಡುಗಡೆಗೊಳಿಸಬೇಕಾಗಿ ವಿನಂತಿ.
#MangaloreUniversity
#MU
#Kasaragod
#Kannada
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ