DARK MODE 

ಭಾನುವಾರ, ಅಕ್ಟೋಬರ್ 11, 2020

ಕೇರಳ ಪಿ.ಎಸ್.ಸಿ‌ ನೋಂದಣಿ ಪ್ರಕ್ರಿಯೆ

ಕೇರಳ ಲೋಕ ಸೇವಾ ಆಯೋಗದ (KPSC) ಆನ್ಲೈನ್ ವೇದಿಕೆಯು "ತುಳಸಿ" ಎಂಬ ಹೆಸರಿನಲ್ಲಿ ತಿಳಿಯಲ್ಪಡುತ್ತದೆ. ಕೇರಳದಲ್ಲಿ ನಡೆಯುವ ಸಾರ್ವಜನಿಕ ಸೇವಾ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಯು "ತುಳಸಿ" ವೆಬ್ಸೈಟ್ ನಲ್ಲಿ ಒಂದು ಬಾರಿ ನೋಂದಣಿ (One Time Registration) ಮಾಡಬೇಕು.

ನೋಂದಣಿ ಪ್ರಕ್ರಿಯೆಯ ಹಂತಗಳು:
ಬೇಕಾಗುವ ದಾಖಲೆಗಳು :
  • ಮೊಬೈಲ್ ಸಂಖ್ಯೆ, ಈಮೈಲ್ ವಿಳಾಸ
  • ಆಧಾರ್ ಸಂಖ್ಯೆ
  • ಇತ್ತೀಚಿಗಿನ ಭಾವಚಿತ್ರ [ಗರಿಷ್ಠ ಗಾತ್ರ - 30 ಕೆಬಿ, ಚಿತ್ರದ ಅಳತೆ - 150W X 200H Pixel, ಚಿತ್ರದ ಪ್ರಕಾರ - JPG], ಭಾವಚಿತ್ರದ ಕೆಳಭಾಗದಲ್ಲಿ ಬಿಳಿ ಆಯತಾಕಾರದ ಹಿನ್ನೆಲೆಯೊಂದಿಗೆ ಕಪ್ಪು ಬಣ್ಣದ ಪಠ್ಯದಲ್ಲಿ ನಿಮ್ಮ ಹೆಸರು ಮತ್ತು ಫೋಟೋ ತೆಗೆದ ದಿನಾಂಕವನ್ನು ಸೇರಿಸಿರಬೇಕು. 

  • ನಿಮ್ಮ ಸಹಿ [ ನೀಲಿ / ಕಪ್ಪು ಶಾಯಿಯಲ್ಲಿ ಉತ್ತಮ ಗುಣಮಟ್ಟದ ಬಿಳಿ ಕಾಗದದ ಮೇಲೆ ನಿಮ್ಮ ಸಹಿಯನ್ನು ಹಾಕಬೇಕು. ಆ ಚಿತ್ರ JPG ಫಾರ್ಮ್ಯಾಟ್ ನಲ್ಲಿ ಇರಬೇಕು. ಗರಿಷ್ಠ ಗಾತ್ರ: 30 ಕೆಬಿ, ಚಿತ್ರದ ಅಳತೆ : 150W X 100H Pixel ]
  • ಭಾವಚಿತ್ರ ಹಾಗು ಸಹಿಯನ್ನು ಮೇಲೆ ಹೇಳಲಾದ ಅಳತೆಯಲ್ಲಿ ಎಡಿಟ್ ಮಾಡಲು "ತುಳಸಿ" ವೆಬ್ಸೈಟ್ ನಲ್ಲಿ ಸಾಧ್ಯವಿದೆ. ಅದಕ್ಕಾಗಿ https://thulasi.psc.kerala.gov.in/ ವೆಬ್ ಪುಟಕ್ಕೆ ಭೇಟಿನೀಡಬೇಕು. ಆ ಪುಟದ ಬಲಬದಿಯಲ್ಲಿ "Resize Photograph/Signature" ಎಂದು ಬರೆದಿರುವಲ್ಲಿ ಕ್ಲಿಕ್ ಮಾಡಿರಿ. ಆಗ ಚಿತ್ರದ ಅಳತೆ ಸರಿಪಡಿಸುವ ಮೆನು ತೆರೆದು ಬರುತ್ತದೆ. ಅಲ್ಲಿ ಚಿತ್ರ ಅಪ್ಲೋಡ್ ಮಾಡಿ. ನಂತರ ಆ ಚಿತ್ರಗಳನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬೇಕು.

ಮೊದಲ ಬಾರಿ ನೋಂದಣಿ ಮಾಡುವ ವಿಧಾನ :
  1. ಆರಂಭದಲ್ಲಿ, ಕೇರಳ ಲೋಕಸೇವಾ ಆಯೋಗದ ತುಳಸಿ ವೆಬ್‌ಸೈಟ್ https://thulasi.psc.kerala.gov.in/ ಅನ್ನು ತೆರೆಯಿರಿ
  2. ಹೊಸ ಬಳಕೆದಾರರಿಗಾಗಿ, ಪುಟದ ಬಲಭಾಗದಲ್ಲಿರುವ Sign Up ಬಟನ್ ಕ್ಲಿಕ್ ಮಾಡಿ. 

  3. ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ. 
  4. ಜಾತಿ ಆಯ್ಕೆ ಮಾಡುವಾಗ Caste: A-C, Caste: D-J, Caste: K, Caste: M-O ಮೊದಲಾದ ಆಯ್ಕೆ ಕಾಣಬಹುದು. ಅಂದರೆ, ನೀವು ಆಯ್ಕೆ ಮಾಡುವ ಜಾತಿಯ ಮೊದಲ ಇಂಗ್ಲೀಷ್ ಅಕ್ಷರ ಯಾವ ಆಯ್ಕೆಯಲ್ಲಿ ಇದೆಯೋ, ಆ ಆಯ್ಕೆಯನ್ನು ಆಯ್ದುಕೊಳ್ಳಿ. ನಂತರ ಉಪಜಾತಿ ಎಂಬ ಆಯ್ಕೆಯಲ್ಲಿ ಸ್ಪಷ್ಟ ಆಯ್ಕೆ ದೊರೆಯುತ್ತದೆ.
  5. ID Proof ನ್ನು ಆಧಾರ್ ಕಾರ್ಡ್ ನೀಡುವುದು ಉತ್ತಮ.
  6. ಎಲ್ಲಾ ಮಾಹಿತಿ ನೀಡಿದ ಬಳಿಕ ಕ್ಯಾಪ್ಚ್ಯಾ ಕೋಡ್ ಬರೆದು ಟಿಕ್ ಗುರುತು ಹಾಕಿದ ಮೇಲೆ "Register" ಬಟನ್ ಕ್ಲಿಕ್ ಮಾಡಿ 
  7. User ID ಮತ್ತು  Password ನ್ನು ಭವಿಷ್ಯಕ್ಕಾಗಿ ನೆನಪಿಟ್ಟುಕೊಳ್ಳಿ.
  8. ಫೋಟೋ ಹಾಗು ಸಹಿ ಅಪ್ಲೋಡ್ ಮಾಡುವ ಆಯ್ಕೆ ಲಭಿಸುತ್ತದೆ.
  9. ನಂತರ ನಿಮ್ಮ User ID ಮತ್ತು  Password ನೊಂದಿಗೆ https://thulasi.psc.kerala.gov.in/ ಪುಟದ ಬಲ ಬದಿಯಲ್ಲಿ ಕಂಡುಬರುವ Login ಬಾಕ್ಸ್ ಮೂಲಕ ಲಾಗಿನ್ ಆಗಬೇಕು. 

  10. ಆಗ ತೆರೆದು ಬರುವ ಪರದೆಯಲ್ಲಿ "My Profile" ಎಂಬ ಆಯ್ಕೆ ನೋಡಬಹುದು. ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಶೈಕ್ಷಣಿಕ ಅರ್ಹತೆ, ವೈಯಕ್ತಿಕ ವಿವರಗಳು, ನಿಮಗೆ ತಿಳಿದಿರುವ ಭಾಷೆ, ಹೀಗೆ ಹಲವು ಮಾಹಿತಿ ನೀಡಲು ಅವಕಾಶ ಇದೆ. ಅದನ್ನೆಲ್ಲ ಸರಿಯಾಗಿ ದಾಖಲು ಮಾಡಿದ ನಂತರ Give declaration ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ದೃಢೀಕರಿಸಬೇಕು.
  11. ಇಲ್ಲಿಗೆ ನೋಂದಣಿ ಪ್ರಕ್ರಿಯೆ ಸಂಪೂರ್ಣವಾಯಿತು.
  12. ಮುಂದೆ ಲೋಕಸೇವಾ ಆಯೋಗದ ಅಧಿಸೂಚನೆ ಗೋಚರಿಸುತ್ತದೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಮುಖ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಕೇರಳ ಮೋಟಾರ್ ಕಾರ್ಮಿಕರ ಕ್ಷೇಮನಿಧಿಯ ಬಾಕಿ ಹಣ ಪಾವತಿಗೆ ಅಕ್ಟೋಬರ್ 31 ರತನಕ ಅವಧಿ ವಿಸ್ತರಣೆ

ಕೇರಳ ಮೋಟಾರು ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿಕೊಂಡು ಕನಿಷ್ಠ ಒಂದು ಬಾರಿಯಾದರೂ ಬಾಕಿ ಹಣ ಪಾವತಿಸಿದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಮಿಕರಿಗೆ ಬಾಕಿ ಪಾವತಿ ಗಡುವು...

ಬೆಂಬಲಿಗರು